ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಪತ್ನಿ ರಿವಬಾ ಸೋಲಂಕಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
									
			
			 
 			
 
 			
					
			        							
								
																	ನವದೆಹಲಿಯ ಪ್ರಧಾನಿ ಕಚೇರಿಗೆ ಆಗಮಿಸಿದ ಕ್ರಿಕೆಟಿಗ ಜಡೇಜಾ ಪ್ರಧಾನಿ ಜತೆ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು ಎನ್ನಲಾಗಿದೆ.
									
										
								
																	ಆಸ್ಟ್ರೇಲಿಯಾ ವಿರುದ್ಧ ಕಿರು ಮಾದರಿಯ ಕ್ರಿಕೆಟ್ ಸರಣಿಗೆ ಆಯ್ಕೆಯಾಗದೇ ಇರುವ ಜಡೇಜಾ ಈ ತಿಂಗಳ ಅಂತ್ಯಕ್ಕೆ ಟೆಸ್ಟ್ ಸರಣಿಯಲ್ಲಿ ಆಡಲು ಕಂಗಾರೂಗಳ ನಾಡಿಗೆ ತೆರಳಲಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.