Select Your Language

Notifications

webdunia
webdunia
webdunia
webdunia

ಬೇಕೆಂದೇ ಕೆಣಕುವ ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ಕೊಟ್ಟ ಖಡಕ್ ಸಂದೇಶವೇನು ಗೊತ್ತಾ?

ಬೇಕೆಂದೇ ಕೆಣಕುವ ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ಕೊಟ್ಟ ಖಡಕ್ ಸಂದೇಶವೇನು ಗೊತ್ತಾ?
ಗಬ್ಬಾ , ಬುಧವಾರ, 21 ನವೆಂಬರ್ 2018 (08:46 IST)
ಗಬ್ಬಾ: ತಾವು ಸ್ಲೆಡ್ಜಿಂಗ್ ಮಾಡಲ್ಲ ಎನ್ನುತ್ತಲೇ ತಮ್ಮನ್ನು ಕೆರಳಿಸಲು ಕೆಣಕುತ್ತಿರುವ ಆಸ್ಟ್ರೇಲಿಯನ್ನರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

‘ನಾವಾಗಿಯೇ ಮಾತಿನ ಚಕಮಕಿ ಶುರು ಮಾಡಲ್ಲ. ಆದರೆ ಹಾಗಂತ ತಲೆ ತಗ್ಗಿಸಿ ಕೂರಲ್ಲ. ಭಾರತ ತಂಡ ಯಾವತ್ತೂ ಅಂಕೆ ದಾಟಿ ವರ್ತಿಸಲ್ಲ. ಆದರೆ ಆತ್ಮಗೌರವಕ್ಕೆ ಧಕ್ಕೆ ತಂದರೆ ತಿರುಗಿಸಿಕೊಡುವುದೂ ಗೊತ್ತು’ ಎನ್ನುವ ಮೂಲಕ ಕೊಹ್ಲಿ ಆಟದ ಜತೆಗೆ ಮಾನಸಿಕ ಯುದ್ಧಕ್ಕೂ ರೆಡಿ ಎಂದಿದ್ದಾರೆ.

ಮೊನ್ನೆಯಷ್ಟೇ ಆಸೀಸ್ ಕ್ರಿಕೆಟಿಗ ಪ್ಯಾಟ್ ಕ್ಯುಮಿನ್ಸ್ ಕೊಹ್ಲಿ ಸುಮ್ಮನೇ ಕೂರುತ್ತಾರೆಂದರೆ ನನಗೆ ಅಚ್ಚರಿ ಎಂದಿದ್ದರು. ಅದಕ್ಕಿಂತ ಮೊದಲು ಮಿಚೆಲ್ ಜಾನ್ಸನ್ ಕೂಡಾ ಕೊಹ್ಲಿ ಸೆಂಡ್ ಆಫ್ ಸೆಲೆಬ್ರೇಷನ್ ಮಾಡದಿದ್ದರೆ ಸಾಕು ಎಂದು ಲೇವಡಿ ಮಾಡಿದ್ದರು. ಇದರ ಬೆನ್ನಲ್ಲೇ ಕೊಹ್ಲಿ ಎದುರಾಳಿಗಳಿಗೆ ಈ ರೀತಿ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ಹೇಗೇ ಇದ್ದರೂ ಹೊರಗೆ ವಿರಾಟ್ ಕೊಹ್ಲಿ ಒಳ್ಳೇ ಮನುಷ್ಯ ಎಂದವರು ಯಾರು ಗೊತ್ತೇ?