Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ನಡುವೆ ಮೊದಲ ಟಿ20 ಇಂದು

ಭಾರತ-ಆಸ್ಟ್ರೇಲಿಯಾ ನಡುವೆ ಮೊದಲ ಟಿ20 ಇಂದು
ಬ್ರಿಸ್ಬೇನ್ , ಬುಧವಾರ, 21 ನವೆಂಬರ್ 2018 (08:38 IST)
ಬ್ರಿಸ್ಬೇನ್: ಭಾರತದ ಆಸ್ಟ್ರೇಲಿಯಾ ಸರಣಿಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಇಂದು ಭಾರತ ಮತ್ತು ಆಸೀಸ್ ನಡುವೆ ಬ್ರಿಸ್ಬೇನ್ ನ ಗಬ್ಬಾ ಮೈದಾನದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ.

ಈಗಾಗಲೇ ತವರಿನಲ್ಲಿ ವಿಂಡೀಸ್ ವಿರುದ್ಧ ಟಿ20 ಪಂದ್ಯವಾಡಿರುವ ಚೆನ್ನಾಗಿ ತಯಾರಾಗಿರುವ ಟೀಂ ಇಂಡಿಯಾ ಆಟಗಾರರು ಹೊಸ ಮೈದಾನ, ಹೊಸ ಪಿಚ್, ಹೊಸ ವಾತಾವರಣದಲ್ಲಿ ಆಡಲು ಸಜ್ಜಾಗಿ ನಿಂತಿದೆ.

ಈಗಾಗಲೇ ಆರಂಭಿಕ ರೋಹಿತ್ ಶರ್ಮಾ ಹೇಳಿದಂತೆ ಈ ಕಿರು ಸರಣಿ ಟೀಂ ಇಂಡಿಯಾಗೆ ಯಶಸ್ಸಿನ ಕೀಲಿ ಕೈ ಇದ್ದಂತೆ. ಮೊದಲ ಪರೀಕ್ಷೆಯಲ್ಲಿ ಗೆದ್ದರೆ ಆತ್ಮವಿಶ್ವಾಸ ಹೆಚ್ಚುವುದು ಸಹಜ. ಉತ್ತಮ ಬ್ಯಾಟಿಂಗ್ ಪಿಚ್ ಇದಾಗಿದ್ದು, 200 ಕ್ಕೂ ಹೆಚ್ಚು ರನ್ ಗಳನ್ನು ಈ ಪಿಚ್ ನಲ್ಲಿ ನಿರೀಕ್ಷಿಸಬಹುದಾಗಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಪಂದ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್-ಅನುಷ್ಕಾ ಹೊಸ ಜಾಹೀರಾತು ನೋಡಿ ಪ್ರೇಕ್ಷಕರು ಫಿದಾ