Publish Date: Wed, 21 Nov 2018 (08:36 IST)
Updated Date: Wed, 21 Nov 2018 (08:37 IST)
ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗಾಗಿ ವಿಮಾನವೇರುವ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಜಾಹೀರಾತೊಂದರ ಚಿತ್ರೀಕರಣ ಮುಗಿಸಿದ್ದರು.
ಆ ಜಾಹೀರಾತಿನ ವಿಡಿಯೋವನ್ನು ಇದೀಗ ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ವಿವಾಹಕ್ಕೆ ಮೊದಲು ಇವರಿಬ್ಬರೂ ಪರಸ್ಪರ ಒಂದಾಗಿ ಬಾಳೋಣ ಎಂದು ಪ್ರಾಮಿಸ್ ಮಾಡುವ ಮನ್ಯಾವರ್ ಜಾಹೀರಾತು ಜನಪ್ರಿಯವಾಗಿದ್ದು ನಿಮಗೆ ನೆನಪಿರಬಹುದು. ಅದೇ ಬ್ರಾಂಡ್ ಗಾಗಿ ಇದೀಗ ಈ ಜೋಡಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತೊಂದು ಜಾಹೀರಾತು ಚಿತ್ರೀಕರಿಸಿಕೊಂಡಿದ್ದಾರೆ.
ಇದರಲ್ಲಿ ಮತ್ತೆ ಮದುವೆ ಮನೆ ಸೆಟ್ ನಲ್ಲಿ ಕಾಣಿಸಿಕೊಂಡಿದ್ದು, ಮದುವೆಯಾಗಿ ಒಂದು ವರ್ಷದ ಬಳಿಕ ಗಂಡ-ಹೆಂಡತಿ ಹೇಗಿರ್ತಾರೆ ಎಂದು ಹೇಳುತ್ತಾ ಇಬ್ಬರು ನವಜೋಡಿಯೊಂದಕ್ಕೆ ಶುಭ ಹಾರೈಸುವ ಕ್ಯೂಟ್ ದೃಶ್ಯಗಳಿವೆ. ಇದನ್ನು ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಸಾವಿರಾರು ಮಂದಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.