Publish Date: Mon, 19 Nov 2018 (08:58 IST)
Updated Date: Mon, 19 Nov 2018 (09:00 IST)
ಸಿಡ್ನಿ: ಟೀಂ ಇಂಡಿಯಾ ಎಂದರೆ ವಿರಾಟ್ ಕೊಹ್ಲಿ ಮಾತ್ರವಲ್ಲ. ಈ ತಂಡದಲ್ಲಿ ಮತ್ತೊಬ್ಬ ಹಿಟ್ ಮ್ಯಾನ್ ಇದ್ದಾನೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ತಮ್ಮ ದೇಶದ ಆಟಗಾರರಿಗೆ ನೆನಪು ಮಾಡಿಸಿದ್ದಾರೆ.
ಯಾವುದೇ ಎದುರಾಳಿಗಳು ಮೊದಲು ಟಾರ್ಗೆಟ್ ಮಾಡುವುದು ರನ್ ಮೆಷಿನ್ ಎಂದೇ ಪರಿಗಣಿತವಾಗಿರುವ ವಿರಾಟ್ ಕೊಹ್ಲಿಯನ್ನು. ಆದರೆ ಇದರ ನಡುವೆ ಇತ್ತೀಚೆಗೆ ರನ್ ಮಳೆಯನ್ನೇ ಹರಿಸುತ್ತಿರುವ ರೋಹಿತ್ ಶರ್ಮಾರನ್ನೇ ಮರೆಯುತ್ತಿದ್ದಾರೆ.
‘ರೋಹಿತ್ ಲಯಕ್ಕೆ ಬಂದರೆ ಸುಲಲಿತವಾಗಿ ಬ್ಯಾಟಿಂಗ್ ಮಾಡುತ್ತಾರೆ. ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎನ್ನುವ ಮೂಲಕ ತಮ್ಮ ಟಾರ್ಗೆಟ್ ಕೊಹ್ಲಿ ಮಾತ್ರ ಆಗಿರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.