Publish Date: Tue, 20 Nov 2018 (09:21 IST)
Updated Date: Tue, 20 Nov 2018 (09:23 IST)
ಸಿಡ್ನಿ: ತಾವು ಈ ಬಾರಿ ಭಾರತ ಸರಣಿ ಸಂದರ್ಭದಲ್ಲಿ ಸ್ಲೆಡ್ಜಿಂಗ್ ಮಾಡುವುದಿಲ್ಲ ಎನ್ನುತ್ತಲೇ ಆಸ್ಟ್ರೇಲಿಯನ್ ಕ್ರಿಕೆಟಿಗರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಬೇಕೆಂದೇ ಕೆಣಕಿ ಕೆರಳಿಸುತ್ತಿದ್ದಾರೆ.
ಆಟದ ಜತೆಗೆ ಮಾನಸಿಕವಾಗಿಯೂ ಹೋರಾಡುವಲ್ಲಿ ಆಸೀಸ್ ಕ್ರಿಕೆಟಿಗರದ್ದು ಎತ್ತಿದ ಕೈ. ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ನೋ ಸ್ಲೆಡ್ಜಿಂಗ್ ಪಾಲಿಸಿ ಮಾಡುವುದಾಗಿ ಹೇಳಿಕೊಂಡಿದೆ. ಈ ನಿರ್ಧಾರವನ್ನು ವಿರಾಟ್ ಕೊಹ್ಲಿಗೆ ಸ್ವಾಗತಿಸಿದ್ದಾರೆ.
ಹಾಗಿದ್ದರೂ ಬೇಕೆಂದೇ ಕೊಹ್ಲಿಯನ್ನು ಕೆಣಕಿ ಅವರಾಗಿಯೇ ಮಾತಿನ ಯುದ್ಧಕ್ಕೆ ತೊಡಗಲು ಆಸೀಸ್ ಆಟಗಾರರು ಕೆರಳಿಸುವ ಮಾತನಾಡುತ್ತಿದ್ದಾರೆ. ಇದೀಗ ಆಸೀಸ್ ಕ್ರಿಕೆಟಿಗ ಪ್ಯಾಟ್ ಕ್ಯುಮಿನ್ಸ್ ಕೊಹ್ಲಿಯನ್ನು ಕೆಣಕಿದ್ದಾರೆ. ಈ ಸರಣಿಯಲ್ಲಿ ನಾವು ಬಿಡಿ, ಕೊಹ್ಲಿ ಸುಮ್ಮನಿದ್ದರೆ ಅದುವೇ ಅಚ್ಚರಿ ಎನ್ನುವ ಮೂಲಕ ಟೀಂ ಇಂಡಿಯಾ ನಾಯಕನನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.