Publish Date: Wed, 21 Nov 2018 (08:41 IST)
Updated Date: Wed, 21 Nov 2018 (08:42 IST)
ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ವರ್ತನೆಯಿಂದ ಎದುರಾಳಿಗಳ ಕೆಂಗಣ್ಣಿಗೆ ಗುರಿಯಾಗುವುದಿದೆ. ಅದರಲ್ಲೂ ಆಸ್ಟ್ರೇಲಿಯಾ ಆಟಗಾರರಿಗೆ ಕೊಹ್ಲಿಯನ್ನು ಕಂಡರೆ ಅದೇನೋ ಉರಿ.
ಕೊಹ್ಲಿಯನ್ನು ಕಂಡರೆ ಕೆಂಡ ಕಾರುತ್ತಿದ್ದ ಆಸೀಸ್ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಆಡಿದ ಮೇಲೆ ಕೊಹ್ಲಿ ಮೇಲಿನ ಅಭಿಪ್ರಾಯವೇ ಬದಲಾಗಿರುವುದಾಗಿ ಹೇಳಿದ್ದಾರೆ.
‘ಮೈದಾನದಲ್ಲಿ ನಾವು ಹಲವು ಬಾರಿ ಚಕಮಕಿ ನಡೆಸಿದ್ದಿದೆ. ಆದರೆ ಸರಣಿ ಮುಗಿದ ಮೇಲೆ ನಾವು ಇದರ ಬಗ್ಗೆ ಹೇಳಿಕೊಂಡು ನಕ್ಕಿದ್ದೂ ಇದೆ. ಈ ಬಾರಿಯೂ ಅಷ್ಟೇ. ಮೈದಾನದಲ್ಲಿ ಹೇಗೇ ಇರಲಿ, ಹೊರಗೆ ಬಂದರೆ ಕೊಹ್ಲಿಯ ವ್ಯಕ್ತಿತ್ವವೇ ಬೇರೆ. ಅವರು ಒಳ್ಳೆ ಮನುಷ್ಯ. ಎಲ್ಲರೊಂದಿಗೆ ಬೆರೆಯಲು, ತಮಾಷೆ ಮಾಡುತ್ತಾ ಸ್ನೇಹಿತರಂತೆ ಕಾಲ ಕಳೆಯಲು ಇಷ್ಟಪಡುತ್ತಾರೆ’ ಎಂದು ಮಿಚೆಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.