Publish Date: Thu, 22 Nov 2018 (17:21 IST)
Updated Date: Thu, 22 Nov 2018 (17:23 IST)
ಬೆಳಗಾವಿ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಮುಂಬೈ ಎದುರು ಮೊದಲ ಇನಿಂಗ್ಸ್ ನಲ್ಲಿ 195 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ ಗಳಿಸಿದ 400 ರನ್ ಗಳಿಗೆ ಪ್ರತಿಯಾಗಿ ಮುಂಬೈ 205 ರನ್ ಗಳಿಸಿ ಆಲೌಟ್ ಆಯಿತು. ಕರ್ನಾಟಕ ಪರ ರೋಹಿತ್ ಮೋರೆ 5 ವಿಕೆಟ್ ಗಳ ಗೊಂಚಲು ಪಡೆದರೆ, ಪ್ರದೀಶ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಕಬಳಿಸಿದರು.
ನಾಳೆ ಒಂದು ದಿನ ಪಂದ್ಯ ಬಾಕಿ ಇದ್ದು, ಮೂರನೇ ದಿನವಾದ ಇಂದು ಅಂತಿಮವಾಗಿ ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿತ್ತು. ಇದರೊಂದಿಗೆ ಒಟ್ಟಾರೆ 276 ರನ್ ಗಳ ಮುನ್ನಡೆ ಸಾಧಿಸಿದೆ. ಬಹುತೇಕ ಮೊದಲ ಪಂದ್ಯದಂತೇ ಈ ಪಂದ್ಯವೂ ಡ್ರಾದತ್ತ ಮುಖ ಮಾಡುವ ಲಕ್ಷಣ ಗೋಚರಿಸುತ್ತಿದೆ. ಆದರೆ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿರುವುದರಿಂದ ಹೆಚ್ಚುವರಿ ಅಂಕ ಕರ್ನಾಟಕಕ್ಕೆ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.