ವಿವಾದದ ಬಳಿಕ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಜತೆ ಪ್ರತ್ಯೇಕ ಸಭೆ ನಡೆಸಿದ ಬಿಸಿಸಿಐ

ಮಂಗಳವಾರ, 27 ನವೆಂಬರ್ 2018 (10:21 IST)
ಮುಂಬೈ: ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್‍ ನಲ್ಲಿ ಅನುಭವಿ ಮಿಥಾಲಿ ರಾಜ್ ರನ್ನು ಕೈ ಬಿಟ್ಟ ಬಗ್ಗೆ ವಿವಾದಗಾಳಗಿರುವ ಹಿನ್ನಲೆಯಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಮಿಥಾಲಿ ರಾಜ್ ಜತೆಗೆ ಸಭೆ ನಡೆಸಿದ್ದಾರೆ.


ಇಬ್ಬರೂ ಆಟಗಾರ್ತಿಯರು ಪ್ರತ್ಯೇಕವಾಗಿ ಬಂದು ಜೋಹ್ರಿ ಹಾಗೂ ಬಿಸಿಸಿಐ ಅಧಿಕಾರಿಗಳ ಎದುರು ಹಾಜರಾಗಿದ್ದು, ತಮ್ಮ ವಾದ ಮಂಡಿಸಿದ್ದಾರೆ ಎನ್ನಲಾಗಿದೆ. ಇಬ್ಬರ ವಾದವನ್ನು ಆಲಿಸಲಾಗಿದೆ ಎಂದು ಜೋಹ್ರಿ ಹೇಳಿದ್ದಾರೆ.

ಆದರೆ ಸಭೆಯಲ್ಲಿ ಏನು ಚರ್ಚೆ ನಡೆಯಿತು ಎಂಬ ಬಗ್ಗೆ ಏನನ್ನೂ ಬಹಿರಂಗಪಡಿಸಲ್ಲ ಎಂದು ಜೋಹ್ರಿ ಹೇಳಿದ್ದಾರೆ. ಇನ್ನೊಂದೆಡೆ ಅನುಭವಿ ಮಿಥಾಲಿ ಕೇವಲ ಏಕದಿನ ಪಂದ್ಯಗಳತ್ತ ಗಮನಹರಿಸಲಿ ಎಂದು ಸುಪ್ರೀಂಕೋರ್ಟ್ ನಿಯಮಿತ ಆಡಳಿತ ಮಂಡಳಿ ಸದಸ್ಯೆ ಡಿಯಾನ ಎಡುಲ್ಜಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮಿಥಾಲಿ ಕೇವಲ ಏಕದಿನಕ್ಕೆ ಸೀಮಿತಗೊಳ್ಳುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿಯ ಮಣಿಸಲು ನಿಷೇಧಿತ ವಾರ್ನರ್, ಸ್ಟೀವ್ ಸ್ಮಿತ್ ಮೊರೆ ಹೋದ ಆಸೀಸ್