Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಈ ಋತುವಿನ ಮೊದಲ ಗೆಲುವು

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಈ ಋತುವಿನ ಮೊದಲ ಗೆಲುವು
ಮೈಸೂರು , ಶನಿವಾರ, 1 ಡಿಸೆಂಬರ್ 2018 (16:20 IST)
ಮೈಸೂರು: ಈ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಮೊದಲ ಗೆಲುವು ದಾಖಲಿಸಿದೆ. ಮಹಾರಾಷ್ಟ್ರ ವಿರುದ್ಧ 7 ವಿಕೆಟ್ ಗಳಿಂದ ಜಯಗಳಿಸಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಗೆಲುವಿಗೆ 184 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಉತ್ತಮ ಆರಂಭ ದೊರೆಯಿತು. 121 ರನ್ ಗಳ ಆರಂಭಿಕ ಜತೆಯಾಟವಾಡಿದ ದೇವದತ್ತ ಪಡಿಕ್ಕಲ್ (77 ರನ್) ಮತ್ತು ದೇಗಾ ನಿಶ್ಚಲ್ (61) ಗೆಲುವಿನ ಹಾದಿ ಸುಗಮವಾಗಿಸಿದರು.

ನಂತರ ಎರಡು ವಿಕೆಟ್ ನಿರಂತರವಾಗಿ ಕಳೆದುಕೊಂಡರೂ ಕೆ ಅಬ್ಬಾಸ್ 34 ರನ್ ಸಿಡಿಸಿ ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಕರ್ನಾಟಕ 3 ವಿಕೆಟ್ ಕಳೆದುಕೊಂಡು 184 ರನ್ ಗಳಿಸುವ ಮೂಲಕ ಪೂರ್ಣ ಅಂಕ ಪಡೆದುಕೊಂಡಿತು. ಶ್ರೇಯಸ್ ಗೋಪಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೆಡ್ಡಿ ಹಾಕಿ ಟೀಕೆಗೊಳಗಾದ ವಿರಾಟ್ ಕೊಹ್ಲಿ