Publish Date: Sat, 01 Dec 2018 (09:44 IST)
Updated Date: Sat, 01 Dec 2018 (09:46 IST)
ಸಿಡ್ನಿ: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಇಲೆವೆನ್ ನಡುವೆ ನಡೆದಿದ್ದ ಅಭ್ಯಾಸ ಪಂದ್ಯದ ಟಾಸ್ ವೇಳೆ ಚೆಡ್ಡಿ ಹಾಕಿಕೊಂಡು ಬಂದ ನಾಯಕ ವಿರಾಟ್ ಕೊಹ್ಲಿ ಟೀಕೆಗೊಳಗಾಗಿದ್ದಾರೆ.
ಸಾಮಾನ್ಯವಾಗಿ ಟಾಸ್ ಸಂದರ್ಭದಲ್ಲಿ ನಾಯಕರು ತಮ್ಮ ಯೂನಿಫಾರ್ಮ್ ನಲ್ಲಿ ಆಗಮಿಸುವುದು ವಾಡಿಕೆ. ಆದರೆ ಕೊಹ್ಲಿ ಅಭ್ಯಾಸದ ಸಂದರ್ಭದಲ್ಲಿ ಬಳಸುವ ಶಾರ್ಟ್ಸ್ ಹಾಕಿಕೊಂಡು ಉಡಾಫೆಯಿಂದ ಬಂದಿದ್ದಕ್ಕೆ ಟ್ವಿಟರಿಗರು ಟೀಕಿಸಿದ್ದಾರೆ.
ಇದು ಆಟದ ಮೇಲೆ ಕೊಹ್ಲಿ ಅಗೌರವ ತೋರಿದಂತೆ ಎಂದು ಹಲವರು ಕಿಡಿ ಕಾರಿದ್ದಾರೆ. ನೀವು ಅತ್ಯುತ್ತಮರೇ ಇರಬಹುದು, ಆದರೆ ಕೆಲವು ಸಾಮಾನ್ಯ ಗೌರವ ಕಾಪಾಡಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ