ನಾಳೆಯಿಂದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಶುರು: ರೋಹಿತ್ ಶರ್ಮಾ ಆಡುವುದು ಪಕ್ಕಾ?

ಬುಧವಾರ, 5 ಡಿಸೆಂಬರ್ 2018 (09:12 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಟೆಸ್ಟ್ ಸರಣಿಗೆ ನಾಳೆಯಿಂದ ಚಾಲನೆ ಸಿಗಲಿದೆ. ನಾಳೆ ಅಡಿಲೇಡ್ ನಲ್ಲಿ ಮೊದಲ  ಟೆಸ್ಟ್ ಪಂದ್ಯ ಆರಂಭವಾಗಲಿದೆ.


ಅತಿಥೇಯ ಆಸ್ಟ್ರೇಲಿಯಾಗೆ ಹೋಲಿಸಿದರೆ ಭಾರತ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ನಾಯಕ ವಿರಾಟ್ ಕೊಹ್ಲಿಯೇ ಟೀಂ ಇಂಡಿಯಾದ ಪ್ರಬಲ ಶಕ್ತಿ. ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಗಾಯಗೊಂಡಿರುವುದರಿಂದ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಅದರ ಜತೆಗೆ ರೋಹಿತ್ ಶರ್ಮಾ ಕಳೆದೆರಡು ದಿನದಿಂದ ಕಠಿಣ ಅಭ್ಯಾಸ ನಡೆಸುತ್ತಿರುವುದನ್ನು ಗಮನಸಿದರೆ ಅವರೂ ಮೊದಲ ಟೆಸ್ಟ್ ನಲ್ಲಿ ಆಡುವುದು ಬಹುತೇಕ ಖಚಿತವೆನಿಸುತ್ತದೆ. ಬೌಲಿಂಗ್ ವಿಭಾಗದಲ್ಲಿ ಅಭ್ಯಾಸ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ ಮೊಹಮ್ಮದ್ ಶಮಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಸ್ಪಿನ್ನರ್ ಗಳ ಪೈಕಿ ರವಿಚಂದ್ರನ್ ಅಶ್ವಿನ್ ಆಡಬಹುದು. ಇದುವರೆಗೆ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲದ ಕನಸನ್ನು ಈ ಮೂಲಕ ನನಸು ಮಾಡಲು ಟೀಂ ಇಂಡಿಯಾಗೆ ಇದು ಸುವರ್ಣಾವಕಾಶವಾಗಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 5.30 ಕ್ಕೆ ಆರಂಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೇರೆ ಕ್ರಿಕೆಟಿಗರಿಗೆ ಅನ್ವಯವಾಗುವ ನಿಯಮ ಧೋನಿ, ಶಿಖರ್ ಧವನ್ ಗೆ ಏಕಿಲ್ಲ?