Select Your Language

Notifications

webdunia
webdunia
webdunia
webdunia

ವಿಕೆಟ್ ಹಿಂದುಗಡೆ ರಿಷಬ್ ಪಂತ್ ನಡೆಸಿದ ಮಂಗನಾಟಕ್ಕೆ ಬೆಚ್ಚಿಬಿದ್ದ ಆಸೀಸ್!

ವಿಕೆಟ್ ಹಿಂದುಗಡೆ ರಿಷಬ್ ಪಂತ್ ನಡೆಸಿದ ಮಂಗನಾಟಕ್ಕೆ ಬೆಚ್ಚಿಬಿದ್ದ ಆಸೀಸ್!
ಅಡಿಲೇಡ್ , ಶನಿವಾರ, 8 ಡಿಸೆಂಬರ್ 2018 (09:19 IST)
ಅಡಿಲೇಡ್: ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಸ್ಲೆಡ್ಜಿಂಗ್ ಮಾಡದೇ ಇರಲು ಆಸ್ಟ್ರೇಲಿಯಾ ತೀರ್ಮಾನಿಸಿದ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ನಾವೂ ಶಾಂತಿಯುತ ಕ್ರಿಕೆಟ್ ಆಡುತ್ತೇವೆ ಎಂದಿದ್ದರು.


ಆದರೆ ನಾಯಕನ ಮಾತನ್ನು ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮೀರಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ರಿಷಬ್ ಪಂತ್ ವಿಕೆಟ್ ಕೀಪಿಂಗ್ ಮಾಡುತ್ತಲೇ ಜಿಗುಟು ಆಟ ಆಡುತ್ತಿದ್ದ ಆಸ್ಟ್ರೇಲಿಯಾ ಉಸ್ಮಾನ್ ಖವಾಜರನ್ನು ಕಿಚಾಯಿಸಿದ್ದು ಮೈಕ್ರೋಫೋನ್ ನಲ್ಲಿ ಸ್ಪಷ್ಟವಾಗಿ ಕೇಳಿದೆ.

ಮೊದಲ ಇನಿಂಗ್ಸ್ ನಲ್ಲಿ ಭಾರತದ ಪರ ಚೇತೇಶ್ವರ ಪೂಜಾರ ಇಡೀ ದಿನ ತಾಳ್ಮೆಯ ಆಟ ಆಡಿ ಶತಕ ಗಳಿಸಿದ್ದರು. ಅದೇ ರೀತಿ ಖವಾಜ ಕೂಡಾ ನಿಧಾನಗತಿಯ ಇನಿಂಗ್ಸ್ ಆಡಿ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದ್ದರು. ಈ ವೇಳೆ ರಿಷಬ್ ಪಂತ್ ಖವಾಜರನ್ನು ಕಿಚಾಯಿಸಿದ್ದು, ‘ಎಲ್ಲರೂ ಪೂಜಾರ ಆಗಲು ಸಾಧ್ಯವಿಲ್ಲ ಇಲ್ಲಿ’ ಎಂದಿದ್ದಾರೆ. ಈ ರೀತಿ ಯಾವತ್ತೂ ಆಸ್ಟ್ರೇಲಿಯನ್ನರೇ ಸ್ಲೆಡ್ಜಿಂಗ್ ಗೆ ನಾಂದಿ ಹಾಡಿದರೆ ಈ ಬಾರಿ ಟೀಂ ಇಂಡಿಯಾದ ಯುವ ಆಟಗಾರನೇ ಆ ಕೆಲಸ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೇನು ಭಾರತ ಮೇಲುಗೈ ಸಾಧಿಸಿತೆಂದಾಗ ಆಸ್ಟ್ರೇಲಿಯಾ ನೆರವಿಗೆ ಬಂದ ಮಳೆ!