ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಈ ಬಾರಿ ಸ್ಲೆಡ್ಜಿಂಗ್ ಇರಲ್ಲ ಎಂದು ಆಸೀಸ್ ತಂಡ ತಣ್ಣಗೆ ಕೂತಿರುವಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿಗಳನ್ನು ಕೆಣಕಿದ್ದಾರೆ.
ಕೊಹ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಬಿದ್ದಾಗ ಎದುರಾಳಿಯನ್ನು ಕೆಣಕುವ ರೀತಿ ಸಂಭ್ರಮಿಸಿದ್ದನ್ನು ನೋಡಿ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗ್ ಪ್ರತಿಕ್ರಿಯಿಸಿದ್ದಾರೆ.
‘ಕೊಹ್ಲಿಯ ಈ ಆಕ್ರಮಣಕಾರಿ ವರ್ತನೆ ನನಗೆ ಇಷ್ಟವಾಯಿತು. ಅವರೊಬ್ಬ ಸೂಪರ್ ಸ್ಟಾರ್, ಅಲ್ಲದೆ ನಾಯಕ. ಅವರ ಆಕ್ರಮಣಕಾರಿ ಶೈಲಿ ಸರಿಯಾಗಿಯೇ ಇದೆ. ಆದರೂ ನಾವೆಲ್ಲಾದರೂ ಈ ರೀತಿ ಮಾಡಿದ್ದರೆ ಕೆಟ್ಟವರೆನಿಸಿಕೊಳ್ಳಬೇಕಿತ್ತು’ ಎಂದು ಲ್ಯಾಂಗರ್ ಪರೋಕ್ಷವಾಗಿ ಟೀಂ ಇಂಡಿಯಾ ನಾಯಕನ ವರ್ತನೆಯನ್ನು ಆಕ್ಷೇಪಿಸಿದ್ದಾರೆ.
ಈ ಪಂದ್ಯದಲ್ಲಿ ಕೊಹ್ಲಿ ಜತೆಗೆ ವಿಕೆಟ್ ಕೀಪರ್ ರಿಷಬ್ ಪಂತ್ ಕೂಡಾ ಎದುರಾಳಿಗಳನ್ನು ಮಾತಿನಲ್ಲಿ ಕೆಣಕುವ ಪ್ರಯತ್ನ ಮಾಡಿದ್ದಾರೆ. ಅಚ್ಚರಿಯೆಂದರೆ ಈ ಬಾರಿ ಆಸೀಸ್ ಆಟಗಾರರಿಗಿಂತ ಮೊದಲು ಟೀಂ ಇಂಡಿಯಾ ಆಟಗಾರರೇ ಮೈಂಡ್ ಗೇಮ್ ಶುರು ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ