Publish Date: Mon, 10 Dec 2018 (09:40 IST)
Updated Date: Mon, 10 Dec 2018 (09:41 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ಮೊದಲು ಎ ತಂಡದ ಪರ ಟೆಸ್ಟ್ ಆಡಿದ್ದ ಅಜಿಂಕ್ಯಾ ರೆಹಾನೆ ಕೋಚ್ ರಾಹುಲ್ ದ್ರಾವಿಡ್ ರಿಂದ ಹಸ್ತಾಕ್ಷರ ಬರೆಸಿದ ಬ್ಯಾಟ್ ಪಡೆದಿದ್ದರು.
ಇಷ್ಟು ದಿನ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ರೆಹಾನೆಗೆ ಇದೀಗ ಆ ಬ್ಯಾಟ್ ನಿಂದ ಅದೃಷ್ಟ ಖುಲಾಯಿಸಿದೆ. ಈ ಸರಣಿಯುದ್ದಕ್ಕೂ ದ್ರಾವಿಡ್ ಹಸ್ತಾಕ್ಷರವಿರುವ ಬ್ಯಾಟ್ ಬಳಸಲು ರೆಹಾನೆ ನಿರ್ಧರಿಸಿದ್ದಾರೆ. ಅದರಂತೆ ಅಡಿಲೇಡ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಇದೇ ಬ್ಯಾಟ್ ಬಳಸಿದ್ದ ರೆಹಾನೆ ಸೂಕ್ತ ಸಮಯದಲ್ಲಿ ಅರ್ಧ ಶತಕ ಗಳಿಸಿ ತಂಡವನ್ನು ಕಾಪಾಡಿದ್ದಾರೆ.
ವಿಶೇಷವೆಂದರೆ ಹಿಂದೆ ದ್ರಾವಿಡ್ ಕೂಡಾ ಇದೇ ಮೈದಾನದಲ್ಲಿ ಮೊದಲ ಇನಿಂಗ್ಸ್ ನಲ್ಲಿ ಶತಕ, ದ್ವಿತೀಯ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿ ಸ್ಟೀವ್ ವಾ ನೇತೃತ್ವದ ಆಸೀಸ್ ತಂಡದ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಲು ನೆರವಾಗಿದ್ದರು. ಇದೀಗ ದ್ರಾವಿಡ್ ಹಸ್ತಾಕ್ಷರದ ಬ್ಯಾಟ್ ಅಜಿಂಕ್ಯಾ ಪಾಲಿಗೆ ಮ್ಯಾಜಿಕ್ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ