ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ

ಬುಧವಾರ, 19 ಡಿಸೆಂಬರ್ 2018 (19:05 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ರಫೆಲ್  ಯುದ್ಧ  ವಿಮಾನ ಖರೀದಿ   ಒಪ್ಪಂದಕ್ಕೆ  ಸಂಬಂಧಿಸಿದಂತೆ  ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು.

ಕಾಂಗ್ರೆಸ್   ಸುಳ್ಳು ಆರೋಪಗಳನ್ನು    ಮಾಡಿದ್ದನ್ನು   ಖಂಡಿಸಿ ಹುಬ್ಬಳ್ಳಿ   ನಗರದ  ತಹಶೀಲ್ದಾರ   ಕಛೇರಿಯ   ಎದುರು   ಬಿಜೆಪಿ ಮುಖಂಡರು, ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ  ಬಿಜೆಪಿ   ಮಹಾನಗರ ಜಿಲ್ಲಾಧ್ಯಕ್ಷ    ನಾಗೇಶ ಕಲಬುರ್ಗಿ   ನೇತೃತ್ವದಲ್ಲಿ    ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಯಿತು.

ಪ್ರಧಾನಿ ನರೇಂದ್ರ  ಮೋದಿ ಅವರ ವಿರುದ್ಧ   ಕಾಂಗ್ರೆಸ್    ವಿನಾಕಾರಣ   ಆರೋಪ ಮಾಡುತ್ತಿದೆ ಎಂದ ಪ್ರತಿಭಟನಾಕಾರರು, ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ    ಕೂಗಿ   ಆಕ್ರೋಶ ವ್ಯಕ್ತಪಡಿಸಿದರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ದಾಳಿ