Select Your Language

Notifications

webdunia
webdunia
webdunia
webdunia

ಸಿಎಂ, ಬಿಜೆಪಿಗೆ ಅಭಿನಂದನೆ ಸಲ್ಲಿಸಿದ್ದು ಏಕೆ?

ಸಿಎಂ, ಬಿಜೆಪಿಗೆ ಅಭಿನಂದನೆ ಸಲ್ಲಿಸಿದ್ದು ಏಕೆ?
ಬೆಳಗಾವಿ , ಬುಧವಾರ, 19 ಡಿಸೆಂಬರ್ 2018 (16:16 IST)
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಚಳಿಗಾಲದ ಅಧಿವೇಶನದಲ್ಲಿ ಸಿಎಂ, ವಿರೋಧ ಪಕ್ಷದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸುವರ್ಣಸೌಧದಲ್ಲಿ ಸದನ ಸುಗಮವಾಗಿ ನಡೆಯಲು ವಿರೋಧ ಪಕ್ಷವಾಗಿರುವ ಬಿಜೆಪಿ ಸಹಕಾರ ನೀಡುತ್ತಿದೆ. ಹೀಗಾಗಿ ವಿಪಕ್ಷವನ್ನು ಅಭಿನಂದಿಸುವುದಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಧಿವೇಶನದಲ್ಲಿ ಮಾತನಾಡಿದ ಸಿಎಂ, ಮುಂಗಾರು ಮಳೆ ಕೊರತೆಯಿಂದ ಬರ ಎದುರಿಸುತ್ತಿರುವ ತಾಲ್ಲೂಕುಗಳ ಘೋಷಣೆ, ಈಗಾಗಲೇ ಹಿಂಗಾರು ಮಳೆ ಕೊರತೆಯಿಂದ ಬರಕ್ಕೆ ಒಳಗಾಗಿರುವ ತಾಲ್ಲೂಕುಗಳ ಘೋಷಣೆಯನ್ನು 2ನೇ ಹಂತದಲ್ಲಿ ಮಾಡಲಾಗುತ್ತದೆ. ಬರ ಮೇಲಿನ ಉತ್ತರ ನೀಡುವ ಸಂದರ್ಭದಲ್ಲಿ ಹಲವು ಸದಸ್ಯರು ತಮ್ಮ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ಬರ ಘೋಷಣೆಯಾಗಿಲ್ಲ ಎಂಬ ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬರ ಘೋಷಣೆ ಕೇಂದ್ರ ಸರ್ಕಾರದ ನಿಯಮಾವಳಿಗಳಂತೆ ನಡೆಯುತ್ತಿದೆ.

ಹಿಂಗಾರು ಮಳೆ ಕೊರತೆಯಿಂದ ಬರ ಎದುರಿಸುತ್ತಿರುವ ತಾಲ್ಲೂಕುಗಳ ಘೋಷಣೆಗೆ ತೀರ್ಮಾನ ಮಾಡಲಾಗಿದೆ ಎಂದರು. ಹಿಂಗಾರು ಮಳೆ ಕೊರತೆಯಿಂದ ಬರ ಎದುರಿಸುತ್ತಿರುವ ತಾಲ್ಲೂಕುಗಳನ್ನು ಸದ್ಯದಲ್ಲೇ ಘೋಷಿಸಲಾಗುವುದು. ಸದಸ್ಯರುಗಳ ಬೇಡಿಕೆಯಂತೆ ಹೊಸ ತಾಲ್ಲೂಕುಗಳ ಸೇರ್ಪಡೆಯೂ ಆಗಲಿದೆ ಎಂದು ಸಿಎಂ ಹೇಳಿದರು.  



Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ 75 ದಿನಗಳ ಚಿಕಿತ್ಸೆಗೆ ಕೋಟಿಗಟ್ಟಲೆ ಬಿಲ್ ನೀಡಿದ ಅಪೋಲೋ ಆಸ್ಪತ್ರೆ