Select Your Language

Notifications

webdunia
webdunia
webdunia
webdunia

ಜಯಲಲಿತಾ 75 ದಿನಗಳ ಚಿಕಿತ್ಸೆಗೆ ಕೋಟಿಗಟ್ಟಲೆ ಬಿಲ್ ನೀಡಿದ ಅಪೋಲೋ ಆಸ್ಪತ್ರೆ

ಜಯಲಲಿತಾ 75 ದಿನಗಳ ಚಿಕಿತ್ಸೆಗೆ ಕೋಟಿಗಟ್ಟಲೆ ಬಿಲ್ ನೀಡಿದ ಅಪೋಲೋ ಆಸ್ಪತ್ರೆ
ಚೆನ್ನೈ , ಬುಧವಾರ, 19 ಡಿಸೆಂಬರ್ 2018 (15:07 IST)
ಚೆನ್ನೈ : ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರು ನಿಧನರಾಗುವ ಮುನ್ನ 75 ದಿನಗಳ ಚಿಕಿತ್ಸೆ ನೀಡಿದ್ದಕ್ಕೆ ಅಪೋಲೋ ಆಸ್ಪತ್ರೆ ಮಾಡಿದ ಬಿಲ್ ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗುವ ಮುನ್ನ 75 ದಿನಗಳ ಕಾಲ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆಗ ಆಸ್ಪತ್ರೆಯ ಒಟ್ಟಾರೆ ಬಿಲ್ 6.85 ಕೋಟಿ ರೂ. ಆಗಿದೆ ಎಂಬ ಅಂಶ ಜಯಾ ಸಾವಿನ ತನಿಖೆ ಕೈಗೊಂಡ ಆಯೋಗದಿಂದ ತಿಳಿದುಬಂದಿದೆ.


ಜಯಾಲಲಿತಾ ಮತ್ತು ಇತರರು ನೆಲೆಸಿದ್ದ ಕೊಠಡಿಗಳ ಬಾಡಿಗೆಗೆ 24 ಲಕ್ಷ ರೂ. ಹಾಗೂ ಚಿಕಿತ್ಸೆಗಾಗಿ 1.9 ಕೋಟಿ ರೂ. ವೆಚ್ಚವಾಗಿದೆ ಎಂದು ಬಿಲ್‌ ನಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ ವಿಚಿತ್ರವೆನೆಂದರೆ ಜಯ ಲಲಿತಾ ಅವರು ಏನೂ ಆಹಾರ ಸೇವನೆ ಮಾಡುತ್ತಿಲ್ಲ ಎಂಬ ಹೊರತಾಗಿಯೂ, ಆಹಾರಕ್ಕಾಗಿಯೇ 1 ರೂ. ಕೋಟಿ ಖರ್ಚಾಗಿದೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯವರು,’ ಈ ಆಹಾರ ಕೇವಲ ಜಯಾ ಅವರಿಗಷ್ಟೇ ಪೂರೈಕೆಯಾಗಿದ್ದಲ್ಲ. ಬದಲಿಗೆ ಜಯಾ ಅವರ ಸಂಬಂಧಿಕರು, ಭದ್ರತಾ ಸಿಬ್ಬಂದಿ, ಸಚಿವರು, ಮತ್ತು ಆಸ್ಪತ್ರೆಗೆ ಭೇಟಿ ನೀಡಿದವರಿಗೆ ನೀಡಿದ ಆಹಾರ ವೆಚ್ಚವಾಗಿದೆ ಎಂದು ಹೇಳಿದೆ.


ಹಾಗೇ ಅಪೋಲೋ ಆಸ್ಪತ್ರೆಯ 6.85 ಕೋಟಿ ರೂ. ಬಿಲ್ ನಲ್ಲಿ ತಮಿಳುನಾಡು ಆಡಳಿತಾರೂಢ ಪಕ್ಷ ಎಐಎಡಿಎಂಕೆ 44 ಲಕ್ಷ ರೂಪಾಯಿ ಇನ್ನೂ ಬಾಕಿ ಉಳಿಸಿಕೊಂಡಿದೆ ಎಂಬ ಅಂಶವೂ ಜಯಾ ಸಾವಿನ ತನಿಖೆ ಕೈಗೊಂಡ ಆಯೋಗಕ್ಕೆ ತಿಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದ ಬಿಜೆಪಿ. ಈ ಬಗ್ಗೆ ಕೇಂದ್ರ ಸಚಿವ ರಾಮದಾಸ್ ಹೇಳಿದ್ದೇನು?