Select Your Language

Notifications

webdunia
webdunia
webdunia
webdunia

ಮುಧೋಳ ಸ್ಪೋಟ ದುರಂತ ಪ್ರಕರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಡಿಸಿಎಂ

ಮುಧೋಳ ಸ್ಪೋಟ ದುರಂತ ಪ್ರಕರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ  ಘೋಷಣೆ ಮಾಡಿದ ಡಿಸಿಎಂ
ಬಾಗಲಕೋಟೆ , ಸೋಮವಾರ, 17 ಡಿಸೆಂಬರ್ 2018 (14:40 IST)
ಬಾಗಲಕೋಟೆ : ಮುಧೋಳದಲ್ಲಿ ಸ್ಪೋಟ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು  ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ  ಘೋಷಣೆ ಮಾಡಿದ್ದಾರೆ.


ಮುಧೋಳ ತಾಲೂಕಿನ ಕುಳಲಿ ಬಳಿ ಇರುವ ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದರು. ಈ ಕಾರ್ಖಾನೆ ಮಾಲೀಕರಾದ ಬೀಳಗಿ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಈಗಾಗಲೇ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.


ಹಾಗೇ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮೃತರ ಕುಟುಂಬಕ್ಕೆ ತಲಾ2.50 ಲಕ್ಷ ವೈಯಕ್ತಿಕವಾಗಿ ಪರಿಹಾರ ಘೋಷಿಸಿದ್ದಾರೆ. ಇದೀಗ ಸದನದಲ್ಲಿ ಡಿಸಿಎಂ  ಡಾ.ಜಿ.ಪರಮೇಶ್ವರ್ ಅವರು  ಮೃತರ ಕುಟುಂಬಕ್ಕೆ  ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ  ಘೋಷಣೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಮಹಾಕಾಳಿಯ ಆರಾಧಕಿ; ಯಾರೊಂದಿಗೂ ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂದವಳಾರು?