Select Your Language

Notifications

webdunia
webdunia
webdunia
webdunia

ಆನ್ ​ಲೈನ್​ನಲ್ಲಿ ಮರಳು ಮಾರಾಟ ಮಾಡಲು ಬಂದಿದೆ ಈ ಹೊಸ ಆ್ಯಪ್

ಆನ್ ​ಲೈನ್​ನಲ್ಲಿ ಮರಳು ಮಾರಾಟ ಮಾಡಲು ಬಂದಿದೆ ಈ ಹೊಸ ಆ್ಯಪ್
ಬೆಂಗಳೂರು , ಬುಧವಾರ, 8 ಮೇ 2019 (09:39 IST)
ಬೆಂಗಳೂರು : ಮರಳು ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ಯಿಂದ ಗ್ರಾಹಕರನ್ನು ಮುಕ್ತಗೊಳಿಸಲು ‘ಸ್ಯಾಂಡ್​ ಬಜಾರ್​​​‘ ಎಂಬ ಹೊಸ ಮರಳು ಆಪ್ ವೊಂದನ್ನು ಸಿದ್ಧಪಡಿಸಿದ್ದಾರೆ.




ದಕ್ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿಸುವ ವೇಳೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದರಿಂದ ‘ಸ್ಯಾಂಡ್​ ಬಜಾರ್‘​ ಆ್ಯಪ್​ ಅನ್ನು ಬಿಡುಗಡೆಗೊಳಿಸಲಾಗಿದ್ದು, ಫ್ರಮ್​ ಶೋರ್​ ಟು ಎವ್ರಿ ಡೋರ್​​​‘ ಎನ್ನುವ ಘೋಷಣೆಯೊಂದಿಗೆ ‘ಸ್ಯಾಂಡ್​ ಬಜಾರ್​‘ ಆ್ಯಪ್​ ನಲ್ಲಿ ಬುಕ್ಕಿಂಗ್​ ಮಾಡಿದ ಮರಳು ​ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಯೋಚನೆಯನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಶಿಶಿಕಾಂತ್​ ಸೆಂಥಿಲ್​ ತಿಳಿಸಿದ್ದಾರೆ.


‘ಸ್ಯಾಂಡ್​ ಬಜಾರ್​‘ ಆ್ಯಪ್​ ಮೂಲಕ ಮರಳು ಖರೀದಿಸಲು ಬಯಸುವ  ಗ್ರಾಹಕರು ಮೊದಲು ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಂಡು,  ಅದರಲ್ಲಿ ಸಂಪೂರ್ಣ ವಿಳಾಸ, ಮರಳು ಪೂರೈಕೆ ಮಾಡಬೇಕಾದ ಸ್ಥಳ, ಆಧಾರ್​ ನಂಬರ್​, ನಂತರ ಓಟಿಪಿ ಸಂಖ್ಯೆ ನಮೂದಿಸಿದರೆ ಮರಳಿನ ದರ ಕುರಿತಾದ ಮಾಹಿತಿ ದೊರಕುತ್ತದೆ. ಗ್ರಾಹಕರು ಆನ್ ​ಲೈನ್​ನಲ್ಲೇ ಹಣ ಪಾವತಿ ಮಾಡಿ ಮರಳು ಖರೀದಿಸಬಹುದಾಗಿದೆ. ಈ ಆ್ಯಪ್​ ಮೂಲಕ ಮರಳು ಸಾಗಾಟ ಸುಲಭವಾಗಿ ನಡೆಯಲಿದ್ದು, ಗ್ರಾಹಕರಿಗೆ ಅನುಕೂಲಕರವಾಗಲಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಡುಹಗಲೇ ಪತಿಗೆ ಥಳಿಸಿ, ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು