Select Your Language

Notifications

webdunia
webdunia
webdunia
webdunia

ಪ್ರಿಪೇಡ್ ಬಳಕೆದಾರರಿಗೆ ಏರ್ಟೆಲ್ ಕಡೆಯಿಂದ ಬಂಪರ್ ರೀಚಾರ್ಜ್ ಆಫರ್ ಗಳು

ಪ್ರಿಪೇಡ್ ಬಳಕೆದಾರರಿಗೆ ಏರ್ಟೆಲ್ ಕಡೆಯಿಂದ ಬಂಪರ್ ರೀಚಾರ್ಜ್ ಆಫರ್ ಗಳು
ಬೆಂಗಳೂರು , ಮಂಗಳವಾರ, 30 ಏಪ್ರಿಲ್ 2019 (09:04 IST)
ಬೆಂಗಳೂರು : ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳಿಗೆ ಟಕ್ಕರ್ ನೀಡಲು ಏರ್ಟೆಲ್ ಈಗ ಪ್ರಿಪೇಡ್ ಬಳಕೆದಾರರಿಗೆ ಹೊಸ ರೀಚಾರ್ಜ್ ಯೋಜನೆಗಳನ್ನು ಆರಂಭಿಸಿದೆ.


ಏರ್ಟೆಲ್ ತನ್ನ ಪ್ರಿಪೇಡ್ ಬಳಕೆದಾರರಿಗೆ ರೂ. 48 ಪ್ಲಾನ್ ನನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಯಲ್ಲಿ ಗ್ರಾಹಕರಿಗೆ  3GB ಡೇಟಾ, ಪ್ರತಿದಿನ ಹತ್ತು ಉಚಿತ ಎಸ್‌.ಎಂ.ಎಸ್ ಸಿಗಲಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.


ಹಾಗೇ  98 ರೂ.ಗಳ ಪ್ಲಾನ್ ನಲ್ಲಿ ಗ್ರಾಹಕರಿಗೆ 6 ಜಿಬಿ ಡೇಟಾ ಮತ್ತು ಪ್ರತಿದಿನ 10 ಉಚಿತ ಎಸ್‌.ಎಂ.ಎಸ್ ನೀಡುತ್ತಿದೆ. ಈ ಯೋಜನೆ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಯೋಜನೆಗಳು ಯಾವುದೇ ಧ್ವನಿ ಪ್ರಯೋಜನಗಳನ್ನು ಹೊಂದಿಲ್ಲ.
ಇದಲ್ಲದೇ ಹೆಚ್ಚು ಡೇಟಾ, ಅನಿಯಮಿತ ಕರೆ ಸೌಲಭ್ಯ ಬಯಸುವವರಿಗೆ ರೂ. 248 ಯೋಜನೆಯನ್ನು ಪ್ರಾರಂಭಿಸಿದ್ದು, ಇದರಲ್ಲಿ ಪ್ರತಿ ದಿನಕ್ಕೆ 1.4 ಜಿಬಿ ಡೇಟಾ, ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಹಾಗು ದಿನಕ್ಕೆ 100 ಎಸ್.ಎಂ.ಎಸ್ ಪಡೆಯಬಹುದು. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ, ರಾಹುಲ್ ಗಾಂಧಿ ಹಣೆಬರಹ ಇಂದು ನಿರ್ಧರಿಸಲಿರುವ ಚುನಾವಣಾ ಆಯೋಗ