ಜೀಯೋದಿಂದ 600 ರೂ.ಗಳಿಗೆ ಬ್ರಾಡ್‌ಬ್ಯಾಂಡ್, ಲ್ಯಾಂಡ್‌ಲೈನ್, ಟಿವಿ ಚಾನಲ್ಸ್‌ ಆಫರ್

ಗುರುವಾರ, 25 ಏಪ್ರಿಲ್ 2019 (17:12 IST)
ದೇಶದಲ್ಲಿಯೇ ಪ್ರಮುಖ ಟೆಲಿಕಾಂ ಕಂಪೆನಿಯಾದ ರಿಲಯನ್ಸ್ ಜಿಯೋ ಇದೀಗ ಭರ್ಜರಿ ಆಫರ್ ಘೋಷಿಸಿದ್ದು, ಕೇವಲ 600 ರೂ.ಗಳಿಗೆ ಬ್ರಾಡ್‌ಬ್ಯಾಂಡ್, ಲ್ಯಾಂಡ್‌ಲೈನ್, ಟಿವಿ ಚಾನಲ್ಸ್‌ ಆಫರ್ ಅನಿಯಮಿತ ಸೇವೆಗಳನ್ನು ನೀಡುವುದಾಗಿ ಆಫರ್ ನೀಡಿದೆ.
ಪ್ರಸ್ತುತ ಇವೆಲ್ಲಾ ಸೇವೆಗಳನ್ನು ಬಿಡಿಬಿಡಿಯಾಗಿ ಪಡೆದಲ್ಲಿ ಮಾಸಿಕ 1500 ರೂಗಳಿಂದ 2000 ರೂಪಾಯಿಗಳಿಗೆ ವೆಚ್ಚವಾಗುತ್ತಿದೆ. ಆದರೆ ಜೀಯೋ ಆಫರ್ ಸ್ವೀಕರಿಸಿದಲ್ಲಿ ಎಲ್ಲಾ ಸೇವೆಗಳು ಕೇವಲ 600 ರೂಪಾಯಿಗಳಲ್ಲಿ ಲಭ್ಯವಾಗಲಿವೆ. ರಿಲಯನ್ಸ್ ಜಿಯೋ ಗಿಗಾ ಫೈಬರ್‌‌ನಿಂದ 40 ಡಿವೈಸ್‌ಗಳವರೆಗೆ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಬಹುದೆಂದು ತಿಳಿಸಿದೆ.
 
ಈ ಎಲ್ಲಾ ಸೇವೆಗಳನ್ನು ಪಡೆಯಬೇಕಾದಲ್ಲಿ ಗ್ರಾಹಕರು ಆರಂಭದಲ್ಲಿ ಒಂದು ಬಾರಿ 4500 ರೂ.ರಿಫಂಡೇಬಲ್ ಸೆಕ್ಯೂರಿಟಿ ಡಿಪಾಜಿಟ್ ಪಾವತಿಸಬೇಕಾಗುತ್ತದೆ. ಈ ಗ್ರಾಹಕರಿಗೆ 100 ಜಿಬಿ ಡೆಟಾ ಉಚಿತವಾಗಿ ದೊರೆಯಲಿದೆ. ಇಂಟರ್‌ನೆಟ್ ವೇಗ ಗರಿಷ್ಠ 100 ಎಂಬಿಪಿಎಸ್ ವರೆಗೆ ದೊರೆಯಲಿದೆ. ಜಿಯೋ ಗಿಗಾ ಫೈಬರ್ ಮುಂದಿನ ಮೂರು ತಿಂಗಳಲ್ಲಿ ಸೇವೆ ಆರಂಭಿಸಲಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ಆಫರ್ ನೀಡಿದ ಸಿಎಂ?