Select Your Language

Notifications

webdunia
webdunia
webdunia
webdunia

ರಾಜೀನಾಮೆ ಕೊಡೋದೇ ಇಲ್ಲ ಎಂದ ಕೈ ಶಾಸಕ ಯಾರು?

webdunia
  • facebook
  • twitter
  • whatsapp
share
ಗುರುವಾರ, 25 ಏಪ್ರಿಲ್ 2019 (15:54 IST)
ಆಪರೇಷನ್ ಕಮಲ ಸದ್ದು ತೆರೆಮರೆಯಲ್ಲಿ ಕೇಳಿಬರುತ್ತಿವಂತೆಯೇ ಇತ್ತ, ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಸಿ ನಾನು ರಾಜೀನಾಮೆ ನೀಡೋದೇ ಇಲ್ಲ. ಹೀಗಂತ ಕೈ ಶಾಸಕ ಹೇಳಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ ನಿವಾಸಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ ನೀಡಿದ್ದರು. ಇಬ್ಬರು ನಾಯಕರ ನಡುವೆ ಬಿರುಸಿನ ಚರ್ಚೆ ನಡೆಯಿತು. ಈ ವೇಳೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕುರಿತು ಮಾತುಕತೆ ನಡೆಸಲಾಯಿತು. ಸರ್ಕಾರದ ಮುಂದಿನ ನಡೆಯ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಬೇರಿನ್ಯಾವ ಶಾಸಕರು ರಿಸೈನ್ ಮಾಡಬಹುದು? ನಾಗೇಂದ್ರ, ಕುಮಟಳ್ಳಿ ರಾಜೀನಾಮೆ ಕೊಡಬಹುದೇ? ಎಂದೆಲ್ಲ ಚರ್ಚೆ ನಡೆಸಿದ್ರು.  

ಈ ವೇಳೆ ಶಾಸಕ ಸೀಮಂತ್ ಪಾಟೀಲ್ ಹೇಳಿಕೆ ನೀಡಿದ್ದು, ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ರಾಜೀನಾಮೆ ಕೊಡುವ ಯೋಚನೆಯೇ ಇಲ್ಲ. ನಮ್ಮ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇತ್ತು. ಈ ಚರ್ಚೆ ಸಚಿವರ ಬಳಿ ಚರ್ಚೆ ಮಾಡಲು ಬಂದಿದ್ದೇನೆ. ಅದು ಬಿಟ್ಟು ಬೇರೆ ಯಾವುದೇ ವಿಚಾರ ಇಲ್ಲ ಅಂತ ಡಿಸಿಎಂ ಹಾಗೂ ಸಚಿವ ಶಿವಕುಮಾರ ಭೇಟಿ ಬಳಿಕ
ಶ್ರೀಮಂತ ಪಾಟೀಲ್ ಹೇಳಿಕೆ ನೀಡಿದ್ರು.
Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿಗಳು ಯಾರು ಯಾರು?