ಕೈಗೆ ಡಬಲ್ ಡಿಜಿಟ್; ಬಿಜೆಪಿ ದೇಶದಲ್ಲಿ ಸಿಂಗಲ್ ಪಾರ್ಟಿಯಂತೆ!

ಭಾನುವಾರ, 21 ಏಪ್ರಿಲ್ 2019 (13:57 IST)
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ , ಬಿಜೆಪಿ ಸಿಂಗಲ್ ಡಿಜಿಟ್ ಗೆ ತೃಪ್ತಿ ಪಟ್ಟುಕೊಳ್ಳಲಿದೆ ಎಂಬ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಶಾಸಕ ಕುಮಾರ ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಶಾಸಕ ಕುಮಾರ್ ಬಂಗಾರಪ್ಪ ಶಿವಮೊಗ್ಗದಲ್ಲಿ ಮಾತನಾಡಿದ್ದು, ಕಾಂಗ್ರೆಸ್ ದೇಶದಲ್ಲಿ ಡಬ್ಬಲ್ ಡಿಜಿಟ್ ಆಗಿಯೇ ಇರುತ್ತೆ.  ಆದರೆ ಬಿಜೆಪಿ ದೇಶದಲ್ಲಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿಯೇ ಆಗಿ ಗೆದ್ದುಬರುತ್ತೆ ಎಂದಿದ್ದಾರೆ.

ಮೈತ್ರಿ ಪಕ್ಷ ಎಲ್ಲಿ ಕೆಲಸವಾಗಬೇಕೋ ಅಲ್ಲಿ ಕೆಲಸ ಮಾಡಿಲ್ಲ. ಅತಿವೃಷ್ಠಿ, ಅನಾವೃಷ್ಠಿಯಾದಾಗ ಸೊರಬಕ್ಕೆ ಬನ್ನಿ ಎಂದರು ಮುಖ್ಯಮಂತ್ರಿ ಬರಲಿಲ್ಲ. ಆದರೆ ಇದೀಗ ಚುನಾವಣೆ ಸಂದರ್ಭದಲ್ಲಿ ಫಾರಿನ್ ಅಭ್ಯರ್ಥಿ ಪರ ಪ್ರಚಾರಕ್ಕೆ ವಾರಾನುಗಟ್ಟಲೆ ಕ್ಷೇತ್ರದಲ್ಲಿ ಟಿಕಾಣಿ ಹೂಡುತ್ತಾರೆ. ಇವರಿಗೆ ಅಧಿಕಾರ ಮುಖ್ಯ. ಜನರ ಸಂಕಷ್ಟ ಪರಿಹರಿಸುವುದು ಮುಖ್ಯವಲ್ಲ ಎಂದರು.

 ಬೇಟೆಯಾಡಲು ಎಲ್ಲಾ ಪ್ರಾಣಿಗಳು ಒಟ್ಟೊಟ್ಟಿಗೆ ಬರುತ್ತವೆ. ಆದರೆ ಸಿಂಹ ಮಾತ್ರ ಒಂದೇ ಬರುತ್ತದೆ. ಇಲ್ಲಿ ಎಲ್ಲಾ ಪ್ರಾಣಿಗಳು ಎಂದರೆ ಮೈತ್ರಿ ಪಕ್ಷ. ಸಿಂಹ ಎಂದರೆ ಬಿಜೆಪಿ ಅದು ಮೋದಿ ಎಂದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿಯವರಿಂದಲೇ ಬಿ.ವೈ.ರಾಘವೇಂದ್ರ ಸೋಲು?