Publish Date: Thu, 25 Apr 2019 (16:03 IST)
Updated Date: Thu, 25 Apr 2019 (16:05 IST)
ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಬೆನ್ನಲ್ಲೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ತೀವ್ರಗೊಂಡಿದೆ.
ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಖುದ್ದು ಕೈ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿಯನ್ನ ಕರೆಸಿಕೊಂಡು ಮಾತನಾಡಿದ್ದಾರೆ.
ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ಸುದೀರ್ಘ ಚರ್ಚೆ ನಡಸಿರುವ ಸಿಎಂ ಕುಮಾರಸ್ವಾಮಿ, ಸುಮಾರು ಒಂದೂವರೆ ತಾಸು ರಮೇಶ್ ಜೊತೆ ಮಾತುಕತೆ ನಡೆಸಿದ್ರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಆಡಳಿತ ನಡೆಸುತ್ತಿದ್ದೇನೆ. ಯಾರನ್ನೂ ನಾನು ಕಡೆಗಣಿಸುತ್ತಿಲ್ಲ. ನಿಮ್ಮ ಯಾವುದೇ ಸಮಸ್ಯಗಳಿದ್ದರೂ ನಾನೇ ಖುದ್ದು ನಿಂತು ಬಗೆಹರಿಸುತ್ತೇನೆ ಎಂದರು.
ನಮ್ಮ ಪಕ್ಷದ ಕೋಟಾದಲ್ಲೇ ನಿಮಗೆ ಸಚಿವ ಸ್ಥಾನವನ್ನೂ ಕೊಡುತ್ತೇವೆ. ನಿಮ್ಮ ಜಿಲ್ಲೆಯ ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಕಟಿ ಬದ್ಧವಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಇರಲು ಆಗದಿದ್ದಲ್ಲಿ ಜೆಡಿಎಸ್ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ನಿಮ್ಮನ್ನ ಗೌರವದಿಂದ ನೋಡಿಕೊಳ್ತೇವೆ.
ಬೇಕಿದಲ್ಲಿ ನಿಮ್ಮ ಹೈಕಮಾಂಡ್ ಜೊತೆ ನಾನೂ ಚರ್ಚೆ ನಡೆಸುತ್ತೇನೆ. ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಿರಿ. ರಾಜೀನಾಮೆ ನಿರ್ಧಾರ ಕೈಬಿಡುವಂತೆ ರಮೇಶ್ ಮನವೊಲಿಕೆ ಯತ್ನವನ್ನು ಸಿಎಂ ನಡೆಸಿದ್ದಾರೆ.