Select Your Language

Notifications

webdunia
webdunia
webdunia
webdunia

ಜಿಯೋನ ಈ ಆ್ಯಪ್ ಮೂಲಕ ಒಮ್ಮೆ ಒಟ್ಟಿಗೆ 10 ಮಂದಿ ಮಾತನಾಡಬಹುದಂತೆ

ಜಿಯೋನ ಈ ಆ್ಯಪ್ ಮೂಲಕ ಒಮ್ಮೆ ಒಟ್ಟಿಗೆ 10 ಮಂದಿ ಮಾತನಾಡಬಹುದಂತೆ
ನವದೆಹಲಿ , ಗುರುವಾರ, 28 ಫೆಬ್ರವರಿ 2019 (07:07 IST)
ನವದೆಹಲಿ : ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಜಿಯೋ ಗ್ರೂಪ್ ಟಾಕ್ ಹೆಸರಿನ ಹೊಸ ಆಪ್ ನ್ನು ಬಿಡುಗಡೆ ಮಾಡಿದೆ.


ಈ ಆಪ್ ಮೂಲಕ ಬಳಕೆದಾರರು VoLTE ನಲ್ಲಿ ಗ್ರೂಪ್ ಕಾನ್ಫರೆನ್ಸ್ ಕರೆಗಳನ್ನು ಮಾಡಿ ಒಮ್ಮೆ ಒಟ್ಟಿಗೆ 10 ಮಂದಿ ಮಾತನಾಡಬಹುದು. ಇದು ಹೆಚ್.ಡಿ. ವಾಯ್ಸ್ ಕಾಲಿಂಗ್ ಬೆಂಬಲಿಸುತ್ತದೆ. ಈ ಆಪ್ ನಲ್ಲಿ ಲೆಕ್ಚರ್ ಮೋಡ್ ನಿಂದ ಮ್ಯೂಟ್ ಮೋಡ್ ವರೆಗೆ ಅನೇಕ ಆಯ್ಕೆಗಳನ್ನು ನೀಡಲಾಗಿದೆ. ಆದರೆ ಜಿಯೋ ಸಿಮ್ ಬಳಕೆದಾರರು ಮಾತ್ರ ಈ ಆಪ್ ನ ಲಾಭ ಪಡೆಯಬಹುದಾಗಿದೆ. ಸದ್ಯ ಆಪ್ ನ ಪ್ರಯೋಗ ಆವೃತ್ತಿ ಪ್ರಾರಂಭವಾಗಿದೆ.


ಜಿಯೋ ಗ್ರೂಪ್ ಟಾಕ್ ಆಪ್, ಆಂಡ್ರಾಯ್ಡ್ ಹಾಗೂ ಐಒಎಸ್ ಎರಡರಲ್ಲೂ ಲಭ್ಯವಿದೆ. ಆಪ್ ಡೌನ್ಲೋಡ್ ಮಾಡಿದ ನಂತರ ಗ್ರಾಹಕರು ಜಿಯೋ ನಂಬರ್ ಹಾಕಬೇಕಾಗುತ್ತದೆ. ನಂತರ ಸಿಗುವ ಓಟಿಪಿ ಬಳಸಿ ನೋಂದಣಿ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಕು ತೋರಿಸಿ ವಿವಾಹಿತೆಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ಎಸಗಿದ ಬಾಬಾ