Select Your Language

Notifications

webdunia
webdunia
webdunia
webdunia

ಇಂದು ಪ್ರಧಾನಿ ಮೋದಿಯಿಂದ 800 ಕೆಜಿ ತೂಕದ ಬೃಹತ್ ಭಗವದ್ಗಿತೆ ಗ್ರಂಥ ಅನಾವರಣ

ಇಂದು ಪ್ರಧಾನಿ ಮೋದಿಯಿಂದ  800 ಕೆಜಿ ತೂಕದ ಬೃಹತ್ ಭಗವದ್ಗಿತೆ ಗ್ರಂಥ ಅನಾವರಣ
ನವದೆಹಲಿ , ಮಂಗಳವಾರ, 26 ಫೆಬ್ರವರಿ 2019 (07:33 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಇಸ್ಕಾನ್ ದೇವಸ್ಥಾನದಲ್ಲಿ 800 ಕೆಜಿ ತೂಕದ ಬೃಹತ್ ಭಗವದ್ಗಿತೆ ಗ್ರಂಥನ್ನು  ಅನಾವರಣ ಗೊಳಿಸಲಿದ್ದಾರೆ.


ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಖ್ಯಾತಿಗೆ ಪಾತ್ರವಾಗಿದ್ದ  ಈ ಭಗವದ್ಗೀತೆಯು 670 ಪುಟುಗಳನ್ನು ಹೊಂದಿದ್ದು, 2.8 ಮೀಟರ್ ಎತ್ತರ ಹಾಗೂ 2 ಮೀಟರ್ ಉದ್ದವಿದೆ. ಈ ಬೃಹತ್ ಗ್ರಂಥವನ್ನು ಸಿದ್ಧಪಡಿಸಲು ಸುಮಾರು 1.5 ಕೋಟಿ ರೂ. ಖರ್ಚಾಗಿದ್ದು, ಈ ಮೊತ್ತವನ್ನು ವಿಶ್ವದ ವಿವಿಧ ದೇಶಗಳ ದಾನಿಗಳ ನೆರವಿನಿಂದ ಇಸ್ಕಾನ್ ನ ಇಟಲಿ ಘಟಕ ಭರಿಸಿದೆ ಎಂದು ಮೂಲಗಳು ತಿಳಿಸಿವೆ.


ಭಗವದ್ಗೀತೆ ಗ್ರಂಥವು 18 ಸೂಕ್ಷ್ಮ ವರ್ಣಚಿತ್ರಗಳ ಒಂದು ಕಲಾತ್ಮಕ ಸ್ಪರ್ಶದಿಂದ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿದ್ದು, ವೈಯುಪಿಒ ಸಿಂತೆಟಿಕ್ ಲೇಪಿತ ಮಿಲನ್, ಇಟಲಿ ಕಾಗದವನ್ನು ಬಳಸಿ ಮುದ್ರಿಸಲಾಗಿದೆ ಇದು ವಾಟರ್ ಪ್ರೂಫ್ ಆಗಿದೆ ಎಂದು ಇಸ್ಕಾನ್ ಮೂಲಗಳು ತಿಳಿಸಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ನನ್ನ ಆಪ್ತ ಸ್ನೇಹಿತ ಎಂದ ಸಿದ್ಧರಾಮಯ್ಯ