Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿಯ ದೇಶಭಕ್ತಿಯನ್ನ ಮೆಚ್ಚಿದ ಕೈ ಶಾಸಕಿ

ಪ್ರಧಾನಿ ನರೇಂದ್ರ ಮೋದಿಯ ದೇಶಭಕ್ತಿಯನ್ನ ಮೆಚ್ಚಿದ ಕೈ ಶಾಸಕಿ
ಬೆಳಗಾವಿ , ಮಂಗಳವಾರ, 26 ಫೆಬ್ರವರಿ 2019 (06:32 IST)
ಬೆಳಗಾವಿ : ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ  ದೇಶಭಕ್ತಿಯನ್ನ ಹಾಡಿ ಹೊಗಳಿದ್ದಾರೆ.


ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್,’ ವೇದಿಕೆ ಮೇಲೆ ಮಾತನಾಡುತ್ತ ಬಹಳ ಜನ ರಾಜಕಾರಣಿಗಳನ್ನ ಕಳ್ಳರು, ಸುಳ್ಳರು, ಮೋಸಗಾರರು ಎಂದು ಕರೆಯುತ್ತಾರೆ. ಆದ್ರೆ ಎಲ್ಲಾ ರಾಜಕಾರಣಿಗಳು ಆ ಪಟ್ಟಿಗೆ ಸೇರುವುದಿಲ್ಲ. ಕೆಲವು ರಾಜಕಾರಣಿಗಳ ನಡೆಯನ್ನು, ಕೆಲಸವನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ದೇಶಭಕ್ತಿಯನ್ನ ಯಾರಿಂದಲೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.


ಇದೇ ವೇಳೆ ಮಾತನಾಡಿದ ಅವರು, ‘ಸಮಾಜಮುಖಿಯಾಗಿ, ಸಮಾಜದ ಪರವಾಗಿ ಹಾಗೂ ಸಮಾಜಕೋಸ್ಕರ ಹೋರಾಟ ಮಾಡುವ ಬಹಳಷ್ಟು ತ್ಯಾಗಮಯಿ ರಾಜಕಾರಣಿಗಳಿದ್ದಾರೆ. ಅವರಿಂದಲೇ ಅಲ್ಪ ಸ್ವಲ್ಪ ನ್ಯಾಯ ನಮ್ಮ ಬಡವರಿಗೆ ಹಾಗೂ ರೈತರಿಗೆ ಸಿಗುತ್ತಿದೆ. ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ದು ಸುಳ್ಳಲ್ಲ. ಅವರು ಯಾರಿಗೂ ಮೋಸ ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗಳನ್ನ ಮರೆಯುವಂತಿಲ್ಲ’ ಎಂದು ಹೇಳಿದ್ದಾರೆ.


ಶಾಸಕಿ ಹೆಬ್ಬಾಳ್ಕರ್ ಮೋದಿಯನ್ನ ಹೊಗಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ 2019: ರಿಯಾಲಿಟಿ ಚೆಕ್ ಸರಣಿ ಆರಂಭಿಸಿದ ಬಿಬಿಸಿ