Select Your Language

Notifications

webdunia
webdunia
webdunia
webdunia

ಕೆಲಸ ಕಳೆದುಕೊಂಡು ಅಸಹಾಯಕನಾದ ತಂದೆ ಮಗನಿಗೆ ಮಾಡಿದ್ದೇನು ಗೊತ್ತಾ?

ನವದೆಹಲಿ
ನವದೆಹಲಿ , ಸೋಮವಾರ, 25 ಫೆಬ್ರವರಿ 2019 (06:29 IST)
ನವದೆಹಲಿ : ಕೆಲಸ ಕಳೆದುಕೊಂಡ ತಂದೆಯೊಬ್ಬ ತನ್ನ 6 ವರ್ಷದ ಮಗನನ್ನು ಸಾಕಲು ಆಗದೇ ಕೊಲೆ ಮಾಡಿದ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.


ವಿನೋದ್(46) ಮಗನನ್ನು ಕೊಂದ ತಂದೆ. ವಿನೋದ್ ಹಾಲಿನ ಉತ್ಪನ್ನಗಳನ್ನು ಮಾರುವ ಸೇಲ್ಸ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಈತನ ಪತ್ನಿ ಕ್ಯಾನ್ಸರ್ ಕಾಯಿಲೆಯಿಂದ ಸಾವನಪ್ಪಿದ ಕಾರಣ  ವಿನೋದ್ ತನ್ನ ಮಗನ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.   ಆದರೆ ಇತ್ತೀಚೆಗೆ ಕೆಲಸ ಕಳೆದುಕೊಂಡು ಅಸಹಾಯಕನಾದ ವಿನೋದ್ ತನ್ನ ಮಗನನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಆತನ ಆಸೆ, ಬೇಡಿಕೆಗಳನ್ನು ಪೂರೈಸಲು ಆಗುತ್ತಿಲ್ಲ ಎಂದು ಮನನೊಂದು ಮಗನನ್ನು ಕೊಲೆ ಮಾಡಿದ್ದಾನೆ.


ಈ ಘಟನೆಯ ಬಗ್ಗೆ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ  ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಲ್ಲಿ ಕುಡಿದ ನಶೆಯಲ್ಲಿದ್ದ ವ್ಯಕ್ತಿ ಹಾರಿಸಿದ ಗುಂಡಿಗೆ ಬಲಿಯಾಗಿದ್ಯಾರು ಗೊತ್ತಾ?