ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ ಕಡೆಯಿಂದ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್

ಭಾನುವಾರ, 30 ಡಿಸೆಂಬರ್ 2018 (07:22 IST)
ನವದೆಹಲಿ : ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಆಫರ್ ಎಂಬ ಭರ್ಜರಿ ಆಫರ್ ವೊಂದನ್ನು ನೀಡಿದೆ.


ಹೊಸ ವರ್ಷದ ಕೊಡುಗೆ 399 ರೂ. ರೀಚಾರ್ಜ್ ಮಾಡಿಕೊಳ್ಳುವ ಎಲ್ಲರಿಗೂ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.ಗ್ರಾಹಕರು ಹ್ಯಾಪಿ ನ್ಯೂ ಇಯರ್ ಆಫರ್ ಮೂಲಕ AJIO ಕೂಪನ್ ಗಳ ರೂಪದಲ್ಲಿ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಮೈ ಜಿಯೋ ಆಯಪ್ ನ ಮೈ ಕೂಪನ್ಸ್ ವಿಭಾಗದಲ್ಲಿ ಈ ಕೂಪನ್ ಗಳು ಜಮೆಯಾಗಲಿವೆ. ಕನಿಷ್ಠ 1000 ರೂ. ಖರೀದಿಸುವ ಮೂಲಕ ಈ ಕೂಪನ್ ಬಳಸಿಕೊಳ್ಳಬಹುದು.


ಈ ಆಫರ್ ಹಳೆ ಮತ್ತು ಹೊಸ ಜಿಯೋ ಬಳಕೆದಾರರಿಗೆ ಲಭ್ಯವಿದೆ. ಈಗಾಗಲೇ ಇರುವ AJio ರಿಯಾಯಿತಿಗೂ ಈ ಕೊಡುಗೆ ಅನ್ವಯವಾಗಲಿದೆ. ಈ ಆಫರ್, ಡಿಸೆಂಬರ್ 28 ರಿಂದ ಜನವರಿ 31 ರ ವರೆಗೆ ಮಾತ್ರ ಲಭ್ಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಪ್ಪು ಮಾಡಿದಕ್ಕೆ ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ಆಶ್ರಯ ಸಿಬ್ಬಂದಿ