ಡೊನಾಲ್ಡ್‌ ಟ್ರಂಪ್‌ ಫೋಟೋವಿರುವ ಈ ಟಿಶ್ಯೂ ಪೇಪರ್‌ ಬೆಲೆ ಎಷ್ಟು ಗೊತ್ತಾ?

ಗುರುವಾರ, 9 ಮೇ 2019 (07:37 IST)
ಅಮೇರಿಕಾ : ಅಮೆರಿಕಾದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ದಿನಕ್ಕೊಂದು ವಿಚಾರದ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅವರ ಆಡಳಿತ ನೀತಿಯಂದ ಬೇಸರಗೊಂಡವರು ಅವರ ಬಗ್ಗೆ ವಿಚಿತ್ರವಾಗಿ ಪ್ರಚಾರ ಮಾಡುತ್ತಿದ್ದಾರೆ. 


ಹೌದು. ಈ ಹಿಂದೆ ಡೊನಾಲ್ಡ್‌ ಟ್ರಂಪ್‌ ಅವರ ಮೂರ್ತಿ ಇಟ್ಟು ಇಲ್ಲಿ ಮೂತ್ರ ಮಾಡಬಹುದು ಎಂದು ವ್ಯಂಗ್ಯಮಾಡಿದ್ದರು. ನಂತರ ಟ್ರಂಪ್‌ ಅವರ ಭಾವಚಿತ್ರವಿರುವ ಟಾಯ್ಲೆಟ್‌ ಕ್ಲೀನ್‌ ಬ್ರಷ್‌ ತಯಾರಿಸಿ ಸುದ್ದಿ ಮಾಡದ್ದರು. ಆದರೆ ಇದೀಗ ಚೀನಾದಲ್ಲಿ  ಅವರ ಫೋಟೋ ಇರುವ ಟಿಶ್ಯೂ ಪೇಪರ್‌ ಮಾರಾಟ ಮಾಡಿ -ಕಾಮರ್ಸ್‌ ಸಂಸ್ಥೆಯೊಂದು ಟ್ರಂಪ್ ಮೇಲಿರುವ ತನ್ನ ಆಕ್ರೋಶವನ್ನು ಹೊರಹಾಕಿದೆ.


ಚೀನಾದಲ್ಲಿ ಈ ಟಿಶ್ಯೂ ಪೇಪರ್‌ ನ್ನು ನಾವೆಲ್ಟಿ ಎನ್ನುವ ಸಂಸ್ಥೆ ತಯಾರಿಸಿದ್ದು, ಮೆಕ್ಸಿಕೋ ಭಾಗದಲ್ಲಿ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಟಿಶ್ಯೂ ಪೇಪರ್‌ ಇದಾಗಿದೆ ಎಂದು ಸಂಸ್ಥೆ ತನ್ನ ವೆಬ್‌ ಸೈಟ್‌ ನಲ್ಲಿ ಹೇಳಿಕೊಂಡಿದೆ. ಅಲ್ಲದೇ ಈ ಟಿಶ್ಯೂ ಪೇಪರ್‌ ಬಂಡಲ್‌ ಒಂದಕ್ಕೆ 900 ರೂ. ದರ ನಿಗದಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೈಂಗಿಕ ಕ್ರಿಯೆ ವೇಳೆ ಸಂಗಾತಿ ಮಾಡುವ ಈ ತಪ್ಪು ಅತ್ಯಾಚಾರ ಎಂದು ಪರಿಗಣಿಸಲಾಗಿದೆ