ಲೈಂಗಿಕ ಕ್ರಿಯೆ ವೇಳೆ ಸಂಗಾತಿ ಮಾಡುವ ಈ ತಪ್ಪು ಅತ್ಯಾಚಾರ ಎಂದು ಪರಿಗಣಿಸಲಾಗಿದೆ

ಗುರುವಾರ, 9 ಮೇ 2019 (07:24 IST)
ಬೆಂಗಳೂರು : ಲೈಂಗಿಕ ಜೀವನ  ಪತಿ ಪತ್ನಿಯರ ಸಂಬಂಧವನ್ನು ಇನ್ನೂ ಗಟ್ಟಿಯಾಗಿಸುತ್ತದೆ. ಆದರೆ ಲೈಂಗಿಕ ಕ್ರಿಯೆ ವೇಳೆ ಸಂಗಾತಿ ಮಾಡುವ ಈ ಸಣ್ಣ  ತಪ್ಪು ಅತ್ಯಾಚಾರದ ಸಾಲಿಗೆ ಸೇರಲಿದೆಯಂತೆ.
ಹೌದು. ಜೋಡಿಗಳು ಕಾಂಡಮ್ ಧರಿಸಿ ಲೈಂಗಿಕ ‌ಕ್ರಿಯೆಯಲ್ಲಿ ತೊಡಗಿರುವಾಗ ಸಂಗಾತಿಯ ಅನುಮತಿಯಿಲ್ಲದೇ ಕಾಂಡೋಮ್ ಅನ್ನು ಕಳಚುವುದು(ಸ್ಟೀಲ್ತಿಂಗ್) ಅತ್ಯಾಚಾರ ಎಂದು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಪರಿಗಣಿಸಲಾಗಿದೆ. ಐರಿಶ್ ಕಾನೂನಿನಲ್ಲೂ ಇದನ್ನು ದೌರ್ಜನ್ಯವೆಂದೇ ಪರಿಗಣಿಸಲಾಗುತ್ತಿದೆ. ರೇಪ್ ಕ್ರೈಸಿಸ್ ನೆಟ್ವರ್ಕ್ ಐರ್ಲ್ಯಾಂಡ್ (RCNI) ಸಂಸ್ಥೆಯು ಇದನ್ನು ಅತ್ಯಾಚಾರವೆಂದೇ ಹೇಳುತ್ತಿದೆ.


ಸ್ಟೀಲ್ತಿಂಗ್’ನಿಂದ ಮಹಿಳಾ ಸಂಗಾತಿಯ ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆಯಲ್ಲದೇ ,ಸಂಗಾತಿಯು ಲೈಂಗಿಕ ರೋಗಗಳಿಗೆ ತುತ್ತಾಗುವ ಅಪಾಯವೂ ಹೆಚ್ಚಿಸುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಯಸ್ಸಾದ ತಂದೆ, ತಾಯಿಯ ನಿರ್ಲಕ್ಷ್ಯ ತೋರುವವರಿಗೆ ಚೀನಾದಲ್ಲಿ ಈ ಶಿಕ್ಷೆ ವಿಧಿಸುತ್ತಾರಂತೆ