ಜಾಧವ್ ತನ್ನನ್ನ ತಾನು ಮಾರಾಟ ಮಾಡಿಕೊಂಡಿದ್ದಾರೆಂದ ಅಧ್ಯಕ್ಷ!

ಸೋಮವಾರ, 6 ಮೇ 2019 (19:05 IST)
ಉಮೇಶ್ ಜಾಧವ್‌ಗೆ ಈ ಮೊದಲು ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿತ್ತು. ಆಗ ಮಲ್ಲಿಕಾರ್ಜುನ ಖರ್ಗೆಯವ್ರು ಬೆಂಬಲ ನೀಡಿದ್ದರು. ಆದರೆ ಜಾಧವ್, ಖರ್ಗೆ ಮತ್ತು ಕಾಂಗ್ರೆಸ್ ಗೆ ಮೋಸ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದೂರಿದ್ದಾರೆ.

ಕಲಬುರಗಿ ಜಿಲ್ಲೆ ಟೆಂಗಳಿ ಗ್ರಾಮದಲ್ಲಿ ಕೈ ಕಾರ್ಯಕರ್ತರ  ಬೃಹತ್‌ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗೂಂಡುರಾವ್ ಹೇಳಿಕೆ ನೀಡಿದ್ದು, ಇಂದು ಖರ್ಗೆಯವರಿಗಲ್ಲದೆ ಪಕ್ಷಕ್ಕೂ ಮೋಸ ಮಾಡಿದ್ದಾರೆ ಜಾಧವ್. ಚಿಂಚೋಳಿ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನ ನೀಡಿತ್ತು. ಉಮೇಶ್ ಜಾಧವ್‌ ಮಾತನ್ನ ಯಾರು ನಂಬಬೇಡಿ.  ಅವನೊಬ್ಬ ಸುಳ್ಳುಗಾರ ಎಂದು ಜರಿದರು.

23 ರ ನಂತ್ರ ಸಮ್ಮಿಶ್ರ ಸರ್ಕಾರ ಬಿದ್ದೋಗುತ್ತೆ ಅಂತಾ ಹಗಲುಗನಸು ಕಾಣ್ತಿದಾರೆ ಬಿಜೆಪಿಯವರು ಎಂದರು.

ಕುಂದಗೋಳದಲ್ಲಿ  ಸಚಿವ ಶಿವಳ್ಳಿಯವರ ನಿಧನದಿಂದ ಉಪಚುನಾವಣೆ ಎದುರಾಗಿದೆ. ಆದರೆ ಚಿಂಚೋಳಿಗೆ ಬೈ ಎಲೆಕ್ಷನ್ ಅಗತ್ಯವಿತ್ತಾ? ಜಾಧವ್ ತನ್ನನ್ನ ತಾನು ಮಾರಾಟ ಮಾಡಿಕೊಂಡಿದ್ದಾರೆ ಅಂತ ಗುಂಡೂರಾವ್ ಟೀಕೆ ಮಾಡಿದ್ರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೇವೇಗೌಡ್ರು ಮಾಡಿಸಿದ್ದು ಯಾಗ ಅಲ್ವಂತೆ: ಹಾಗಾದ್ರೆ ಮತ್ತೇನು?