Select Your Language

Notifications

webdunia
webdunia
webdunia
webdunia

ಚುನಾವಣೆ ಫಲಿತಾಂಶ ನಂತ್ರ ಭಾರೀ ಬದಲಾವಣೆ ಆಗುತ್ತೆ ಎಂದ ಯಡಿಯೂರಪ್ಪ

ಚುನಾವಣೆ ಫಲಿತಾಂಶ ನಂತ್ರ ಭಾರೀ ಬದಲಾವಣೆ ಆಗುತ್ತೆ ಎಂದ ಯಡಿಯೂರಪ್ಪ
ಕಲಬುರ್ಗಿ , ಸೋಮವಾರ, 6 ಮೇ 2019 (15:18 IST)
ಕಲಬುರಗಿಯ ಚಿಂಚೋಳಿ ಉಪ ಚುನಾವಣೆಯಲ್ಲಿ ಒಳ್ಳೆಯ ವಾತಾವರಣವಿದೆ. 20 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಿಸಲು ಪ್ರಯತ್ನಿಸುತ್ತೇನೆ. ಕಾಳಗಿ ತಾಲೂಕಿನ ಹಳ್ಳಿಗಳಿಗೆ ಪುನರ್ವಿಂಗಡಣೆ ವೇಳೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ಯತ್ನಿಸುತ್ತೇನೆ. ಹೀಗಂತ ಪ್ರಚಾರದ ವೇಳೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದ ಬಗ್ಗೆ ಜನತೆಯ ಆಕ್ರೋಶವಿದೆ. ರಾಜ್ಯಾದ್ಯಂತ ಬರಗಾಲವಿದ್ದರೂ ಸರ್ಕಾರ ಸ್ಪಂದಿಸದೇ ಇರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಕುಮಾರಸ್ವಾಮಿ ಜನರ ಬಗ್ಗೆ ಹಗುರವಾಗಿ ಮಾತಾಡ್ತಿದಾರೆ. ಹಣದ ಬಲದಿಂದ, ಜಾತಿ ವಿಷ ಬೀಜ ಬಿತ್ತಿ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದಾರೆ ಅವರು ಎಂದರು.

ಉಪ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆ ಫಲಿತಾಂಶದ ನಂತರ ಬದಲಾವಣೆ ಆಗೋದು ಇದೆ. ಅದರ ಪರಿಣಾಮ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.  



 

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿ ಸುದ್ದಿ ನೀಡುವರೇ ಡಿಕೆಶಿ: ಮಹಾರಾಷ್ಟ್ರದ ವಿರುದ್ಧ ರಾಜ್ಯದ ರೈತರ ಹೆಚ್ಚಿದ ಆಕ್ರೋಶ