Select Your Language

Notifications

webdunia
webdunia
webdunia
Friday, 11 April 2025
webdunia

ಮೈತ್ರಿ ಸರಕಾರ ಬೀಳುತ್ತೆ ಅಂತ ನಾನು ಹೇಳೇ ಇಲ್ಲ: ಯಡಿಯೂರಪ್ಪ ಅಚ್ಚರಿ ಹೇಳಿಕೆ

ಬಿಜೆಪಿ
ಕಲಬುರಗಿ , ಸೋಮವಾರ, 6 ಮೇ 2019 (13:28 IST)
ಗೃಹ ಸಚಿವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಬಿಜೆಪಿ ಕಾರ್ಯಕರ್ತನನ್ನ ಬಂಧಿಸಿದ್ದಾರೆ. ಅದಕ್ಕಾಗಿ ಗೃಹ ಸಚಿವರ ಸೇಡಿನ ರಾಜಕಾರಣ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಕುಂದಗೋಳ-ಚಿಂಚೋಳಿ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸುತ್ತೇವೆ. ಈಗಾಗಲೇ ಕಾರ್ಯಕರ್ತರು-ಮುಖಂಡರುಗಳ ಜೊತೆ ಸಭೆ ನಡೆಸಿದ್ದೇವೆ ಎಂದರು.

ಕಲಬುರಗಿ, ಕೋಲಾರ ಲೋಕಸಭೆ ಕ್ಷೇತ್ರ ಸೇರಿದಂತೆ 22 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಮಂಡ್ಯದಲ್ಲಿ ಸುಮಲತಾ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತಾರೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ ಅಂತ ಕಲಬುರಗಿಯಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿದ್ರು.

ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರುತ್ತೆ. ಕೈ -ಜೆಡಿಎಸ್ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಳ್ತಿದಾರೆ.

ಸರ್ಕಾರ ಬೀಳಲಿ ಅಂತಾ ನಾನು ಹಗಲುಗನಸು ಕಂಡಿಲ್ಲ.  ಅವರವರೇ ಹೊಡೆದಾಡಿಕೊಂಡು ಸರ್ಕಾರ ಬೀಳಿಸ್ತಾರೆ ಎಂದ್ರು. ಸರ್ಕಾರ ಬೀಳಿಸೋ ಕೆಲಸ ಹಾಗೂ ಬೀಳುತ್ತೆ ಅಂತಾ ನಾನು ಯಾವತ್ತು ಹೇಳಿಲ್ಲ ಅಂತ ಯಡಿಯೂರಪ್ಪ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್: ಬಿಸಿಲೂರಿಗೆ ಲಗ್ಗೆ ಇಟ್ಟ ಕೈ ಪಡೆ