Select Your Language

Notifications

webdunia
webdunia
webdunia
webdunia

ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಜಿಟಿಡಿ ಹೇಳಿಕೆ ಸತ್ಯ - ಸಿದ್ಧರಾಮಯ್ಯ

ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಜಿಟಿಡಿ ಹೇಳಿಕೆ ಸತ್ಯ - ಸಿದ್ಧರಾಮಯ್ಯ
ಮೈಸೂರು , ಸೋಮವಾರ, 6 ಮೇ 2019 (07:38 IST)
ಮೈಸೂರು : ಉದ್ಬೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ  ಎಂದು  ಜಿಟಿ ದೇವೇಗೌಡರು ಸತ್ಯ ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.




ಮೈಸೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಸಚಿವ ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ. ಉದ್ಬೂರಿನಲ್ಲಿ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ. ಉದ್ಬೂರಿನಲ್ಲಿ ಜೆಡಿಎಸ್ ಮತದಾರರು ಮಾತ್ರ ಇಲ್ಲ. ಕಾಂಗ್ರೆಸ್ ಮತದಾರರು ಇದ್ದಾರೆ. ಕಾಂಗ್ರೆಸ್ ಮತದಾರರು ಕಾಂಗ್ರೆಸ್‌ಗೆ ಮಾಡಿದ್ದಾರೆ. ಜೆಡಿಎಸ್‌ನವರು ಬಿಜೆಪಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಆದರೆ ಉದ್ಬೂರು ಗ್ರಾಮದಲ್ಲಿ ನಡೆದಿರುವುದು ಇಡೀ ಕ್ಷೇತ್ರಕ್ಕೆ ಅನ್ವಯಿಸದು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದು, ಎಲ್ಲರೂ ಬುದ್ದಿವಂತರಿದ್ದಾರೆ. ಶೇ.100ಕ್ಕೆ ನೂರರಷ್ಟು ನಾವು ಮೈಸೂರು -ಕೊಡಗು ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಈಗಲೇ ಎಷ್ಟು ಸಾವಿರ ಮತಗಳಿಂದ ಗೆಲ್ಲುತ್ತೇವೆ ಅಂತ ಶಾಸ ಹೇಳೋಕಾಗುತ್ತಾ, ಮೈಸೂರು- ಕೊಡಗಿನಲ್ಲೂ ನಮಗೆ ಚೆನ್ನಾಗಿ ವೋಟ್ ಬಂದಿದೆ. ಫಲಿತಾಂಶ ಬಂದಾಗ ನಿಮಗೆ ಗೊತ್ತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐದನೇ ಹಂತದ ಚುನಾವಣೆ; ಇಂದು 7 ರಾಜ್ಯಗಳಲ್ಲಿ ಮತದಾನ