Publish Date: Sat, 04 May 2019 (17:44 IST)
Updated Date: Sat, 04 May 2019 (17:47 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ಯತ್ನಾಳ ಮನಸು ಮಾಡಿದ್ರೆ ಎಂ.ಬಿ. ಪಾಟೀಲರನ್ನು ಬಿಜೆಪಿಗೆ ತರಬಹುದು. ಎಂಬಿಪಿ ಅವರನ್ನು ಬಿಜೆಪಿ ತರಲು ನನಗೆ ಹಲವರು ಹೇಳಿದ್ದಾರೆ. ಯತ್ನಾಳ ಪ್ರಯತ್ನ ಮಾಡಿದ್ದರೆ ಎಂಬಿಪಿ ಬಿಜೆಪಿ ತೆಕ್ಕೆಗೆ ಬರುತ್ತಾರೆ ಎಂದಿದ್ದಾರೆ.
ಎಂ.ಬಿ. ಪಾಟೀಲರನ್ನು ಬಿಜೆಪಿಗೆ ಕರೆತರಲು ಪ್ರಯತ್ನ ಮಾಡಿದ್ದು ಮಾಧ್ಯಮಕ್ಕೆ ಯಾಕೇ ಹೇಳಬೇಕು? ಎಂದು ಕೇಳಿದ ಅವರು, ನಗು ನಗ್ತಾ ಅದು ನನ್ನ ವೈಯಕ್ತಿಕ ವಿಚಾರ ಎಂದೂ ಹೇಳಿದ್ರು.
ನಾನು ಪ್ರಯತ್ನ ಮಾಡಿದ್ದು ನನಗೆ ಮಾತ್ರ ಗೊತ್ತು ಅಂತ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ರು.
ಇನ್ನು ಆಪರೇಷನ್ ಹಸ್ತ ವಿಚಾರ ಕುರಿತು ಪ್ರಸ್ತಾಪಿಸಿ, ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರು ಕೀಳುಮಟ್ಟದ ರಾಜಕೀಯ ಮಾಡಲ್ಲ. ಬಿಜೆಪಿ ಶಾಸಕರು ಆಪರೇಷನ್ ಹಸ್ತ ಹಾಗೂ ತೆನೆಗೆ ಹೋಗಲ್ಲ. ಆಪರೇಷನ್ ಹಸ್ತ ಆಡಿಯೋದಲ್ಲಿ ಸಾಸನೂರು ಮಾತುಗಳಿಲ್ಲ. ಸಾಸನೂರು ಆಪರೇಷನ್ ಹಸ್ತಕ್ಕೆ ಒಳಗಾಗುವುದಿಲ್ಲ ಎಂದರು.
ಸಾಸನೂರ ಅವರಿಗೆ ಸಾವಿರ ಕೋಟಿ ಹಾಗೂ ಡಿಸಿಎಂ ಮಾಡ್ತೇನಿ ಅಂದ್ರು ಬಿಜೆಪಿ ಬಿಡಲ್ಲ ಅಂತ ಯತ್ನಾಳ್ ಹೇಳಿದ್ರು.