Select Your Language

Notifications

webdunia
webdunia
webdunia
webdunia

ಸುಮಲತಾ ಜೊತೆ ಮಂಡ್ಯ ನಾಯಕರು ಊಟಕ್ಕೆ ಹೋಗಿರುವುದರಲ್ಲಿ ತಪ್ಪೇನಿದೆ- ಕೈ ಮುಖಂಡರ ಪರ ನಿಂತ ಜಮೀರ್

ಸುಮಲತಾ  ಜೊತೆ ಮಂಡ್ಯ ನಾಯಕರು ಊಟಕ್ಕೆ ಹೋಗಿರುವುದರಲ್ಲಿ ತಪ್ಪೇನಿದೆ- ಕೈ ಮುಖಂಡರ ಪರ ನಿಂತ ಜಮೀರ್
ಬೆಂಗಳೂರು , ಶನಿವಾರ, 4 ಮೇ 2019 (07:04 IST)
ಬೆಂಗಳೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆ ಮಂಡ್ಯ ಕಾಂಗ್ರೆಸ್ ನಾಯಕರು ಊಟಕ್ಕೆ ಹೋಗಿದ್ದಕ್ಕೆ ಸಿಎಂ ಕುಮಾರಸ್ವಾಮಿ ಬೇಸರಗೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹ್ಮದ್ ಮಂಡ್ಯ ನಾಯಕರ ಪರ ನಿಂತಿದ್ದಾರೆ.




ಮಂಡ್ಯ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸುವ ವೇಳೆ ಅಲ್ಲಿಗೆ ಆಗಮಿಸಿದ ಜಮೀರ್ ಅಹಮ್ಮದ್ ಅವರು ಮಾತನಾಡಿ, ಊಟಕ್ಕೆ ಹೋಗುವುದು ತಪ್ಪಲ್ಲ. ಯಾರೇ ಕರೆದರೂ ಊಟಕ್ಕೆ ಹೋಗುತ್ತಾರೆ. ನನ್ನನ್ನು ಕರೆದರೂ ನಾನು ಊಟಕ್ಕೆ ಹೋಗುತ್ತೇನೆ.


ಬರ್ತ್‍ಡೇ ಪಾರ್ಟಿ ಅಂತ ಹೋಗಿದ್ದಾರೆ. ಮಂಡ್ಯ ನಾಯಕರು ಹೋಗಿದ್ದ ಪಾರ್ಟಿಗೆ ಸುಮಲತಾ ಅಂಬರೀಶ್ ಅವರು ಬರುತ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲ. ಇದರಲ್ಲಿ ತಪ್ಪೇನಿದೆ. ಸಿಎಂ ಕುಮಾರಸ್ವಾಮಿಯವರು ಬೇಜಾರು ಮಾಡಿಕೊಂಡರೆ ನಾವೇನು ಮಾಡಲು ಆಗುತ್ತದೆ ಎಂದು ಮಂಡ್ಯ ನಾಯಕರ ಪರ ಬ್ಯಾಟ್ ಬೀಸಿದ್ದಾರೆ.


ಅಲ್ಲದೇ ಮಂಡ್ಯ ಉಪ ಚುನಾವಣೆಯಲ್ಲಿ ಎಲ್ಲರನ್ನೂ ಕರೆಸಿ ಸಿಎಂ ಮಾತನಾಡಿದ್ದರು. ಆದರೆ ಈ ಚುನಾವಣೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಎಲ್ಲರನ್ನೂ ಕರೆದು ಮಾತನಾಡಿದ್ದರೆ ಸರಿ ಆಗುತಿತ್ತು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮೋಜು ಮಸ್ತಿಗಾಗಿ ಬೆಕ್ಕಿನ ಮರಿಗಳ ಮೇಲೆ ನಡೆದಿದೆ ಇಂತಹ ಘೋರ ಕೃತ್ಯ