Publish Date: Mon, 06 May 2019 (08:20 IST)
Updated Date: Mon, 06 May 2019 (08:22 IST)
ನವದೆಹಲಿ: 60 ವರ್ಷಗಳಿಂದ ಕಾಂಗ್ರೆಸ್ ನವರು ಪ್ರಾಕ್ಟೀಸ್ ಮ್ಯಾಚ್ ಆಡ್ತಾ ಇದ್ರಾ? ನಾಲ್ಕು ತಲೆಮಾರಿನವರು ದೇಶದ ಜನರೊಂದಿಗೆ ಆಟ ಆಡ್ತಾ ಇದ್ರು.. ಹೀಗಂತ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಟೀಕಾ ಪ್ರಹಾರ ನಡೆಸಿದ್ದಾರೆ.
ಶೂಟರ್ ಕೂಡಾ ಆಗಿರುವ ರಾಜ್ಯವರ್ಧನ್ ಸಿಂಗ್ ತಮ್ಮದೇ ಶೈಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಮೋದಿ ಸರ್ಕಾರ ಜಾರಿಗೊಳಿಸಿದ ಕೆಲವು ರೈತಪರ ಯೋಜನೆಗಳಿಗೆ ತಡೆ ನೀಡುವ ಮೂಲಕ ರೈತರಿಗೆ ಅನ್ಯಾಯವೆಸಗುತ್ತಿದೆ ಎಂದೂ ಅವರು ಆರೋಪ ಮಾಡಿದ್ದಾರೆ.
‘ಕಾಂಗ್ರೆಸ್ ನವರು ಈ ಬಾರಿ ಸಿಗುತ್ತೆ ನ್ಯಾಯ ಎಂಬ ಸ್ಲೋಗನ್ ಹೇಳುತ್ತಿದ್ದಾರೆ. ಅಂದರೆ ಇದುವರೆಗೆ 60 ವರ್ಷಗಳಿಂದ ಅಭ್ಯಾಸ ಪಂದ್ಯವಾಡುತ್ತಿದ್ದರಾ?’ ಎಂದು ರಾಥೋರ್ ವ್ಯಂಗ್ಯ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ