Publish Date: Sun, 05 May 2019 (17:40 IST)
Updated Date: Sun, 05 May 2019 (17:42 IST)
ನಮ್ ಮುಖಂಡರಿಗೆ ಗ್ರಾಮ ಪಂಚಾಯತಿವಾರು ಜವಾಬ್ದಾರಿ ಕೊಡಲಾಗಿದೆ. ಈ ಹಿಂದೆ ಈ ಕ್ಷೇತ್ರಗಳಲ್ಲಿ ನಾವೇ ಗೆದ್ದಿದ್ದೇವು. ಈಗಲೂ ಗೆಲುವು ನಮ್ಮದೇ… ಹೀಗಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಹೇಳಿದ್ದಾರೆ.
ಬೈ ಎಲೆಕ್ಷನ್ ನಲ್ಲಿ ಡಿಸಿಎಂ ಪರಮೇಶ್ವರ್, ಪ್ರಿಯಾಂಕ ಖರ್ಗೆ, ಎಂ.ಬಿ. ಪಾಟೀಲ್, ತುಕಾರಾಂ, ರಾಜಶೇಖರ್ ಪಾಟೀಲ್ ಸೇರಿದಂತೆ ಹಲವರಿಗೆ ಜವಾಬ್ದಾರಿ ಹಂಚಲಾಗಿದೆ.
ಕುಂದಗೋಳ ಮತ್ತು ಚಿಂಚೋಳಿ ಯಲ್ಲಿ ನಾವು ಗೆಲ್ಲುವುದು ಖಚಿತ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಮುಗಿದಿದೆ. ಈಗ ಎರಡು ಕ್ಷೇತ್ರಗಳ ವಿಧಾನ ಸಭಾ ಉಪ ಚುನಾವಣೆ ನಡೆಯುತ್ತಿವೆ. ಚಿಂಚೋಳಿ ಕ್ಷೇತ್ರ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತೆ ಎಂದರು.
ಕುಟುಂಬ ರಾಜಕಾರಣ ಅಂತ ಪಕ್ಷ ಬಿಟ್ಟು ಹೋಗಿದ್ದ ಉಮೇಶ್ ಜಾಧವ್ ಈಗ ತಮ್ಮ ಪುತ್ರನನ್ನ ಕಣಕ್ಕೆ ಇಳಿಸಿ ಕುಟುಂಬ ರಾಜಕಾರಣ ಅವರೇ ಮಾಡುತ್ತಿರುವುದನ್ನ ಸಾಬೀತು ಮಾಡಿದ್ದಾರೆ ಎಂದು ಟೀಕೆ ಮಾಡಿದ್ರು.