Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯಿಂದ ರಾಹುಲ್ ಗಾಂಧಿಗೆ ಈ ವಿಷಯ ಕಲಿಯಬೇಕಂತೆ!

ಪ್ರಧಾನಿ ಮೋದಿಯಿಂದ ರಾಹುಲ್ ಗಾಂಧಿಗೆ ಈ ವಿಷಯ ಕಲಿಯಬೇಕಂತೆ!
ನವದೆಹಲಿ , ಶುಕ್ರವಾರ, 3 ಮೇ 2019 (06:27 IST)
ನವದೆಹಲಿ: ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ರಾಜಕೀಯವಾಗಿ ಒಬ್ಬರು ಉತ್ತರ ಧ್ರುವವಾದರೆ ಇನ್ನೊಬ್ಬರು ದಕ್ಷಿಣ ಧ್ರುವ. ಹಾಗಿದ್ದರೂ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿಯಿಂದ ಒಂದು ವಿಚಾರ ಕಲಿಯಬೇಕಂತೆ! ಅದೇನು ಗೊತ್ತಾ?


ಇದನ್ನು ಇಂಡಿಯಾ ಟುಡೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ವ್ಯಂಗ್ಯವಾಗಿ ಒಂದು ವಿಚಾರವನ್ನು ಕಲಿಯಲು ಬಯಸುವುದಾಗಿ ಹೇಳಿಕೊಂಡಿದ್ದಾರೆ.

‘ಪ್ರಧಾನಿ ಮೋದಿ ಒಂದೇ ಸಮಯಕ್ಕೆ ಒಬ್ಬರಲ್ಲಿ ಒಂದು ರೀತಿ ಇನ್ನೊಬ್ಬರಲ್ಲಿ ಅದೇ ವಿಚಾರವನ್ನು ಇನ್ನೊಂದು ರೀತಿ ಹೇಳುವ ಕಲೆ ಹೇಗೆ ಕರಗತ ಮಾಡಿಕೊಂಡಿದ್ದಾರೆ ಎಂದು ಕಲಿಯಲು ಬಯಸುತ್ತೇನೆ’ ಎಂದು ರಾಹುಲ್ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಸೂದ್ ಅಜರ್ ಜಾಗತಿಕ ಉಗ್ರ; ಬಿಜೆಪಿ ಸಂಭ್ರಮ