Select Your Language

Notifications

webdunia
webdunia
webdunia
Sunday, 13 April 2025
webdunia

ಮಸೂದ್ ಅಜರ್ ಜಾಗತಿಕ ಉಗ್ರ; ಬಿಜೆಪಿ ಸಂಭ್ರಮ

ಬಿಜೆಪಿ
ಗದಗ , ಗುರುವಾರ, 2 ಮೇ 2019 (19:10 IST)
ಮಸೂದ್ ಅಜರ್ ಜಾಗತಿಕ ಉಗ್ರ ಪಟ್ಟಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿಜಯೋತ್ಸವ ಆಚರಣೆ ಮಾಡಿದೆ.

ಗದಗನಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಜೈಷ್ ಮೊಹ್ಮದ್ ವಿರುದ್ಧ ಘೋಷಣೆ ಕೂಗಿದರು. ವಿಶ್ವದ ಪಾಲಿಗೆ ಕಂಟಕವಾಗಿದ್ದ ಪಾಕಿಸ್ತಾನದ ಮೂಲದ ಜೈಷ್ ಮೋಹ್ಮದ ಉಗ್ರ ಸಂಘಟನೆ ಮುಖ್ಯಸ್ಥನಾದ ಮಸೂದ್ ಅಜರ್ ವಿರುದ್ಧ ಧಿಕ್ಕಾರ ಕೂಗಿದರು.

ಹೀಗೆ ಉಗ್ರರ ವಿರುದ್ಧ ಕಠಿಣ ನಿರ್ಧಾರಗಳ‌ ಮೂಲಕ ಎಲ್ಲಾ ಉಗ್ರರಿಗೆ ತಕ್ಕಪಾಠ ಕಲಿಸುವಂತೆ ಆಗ್ರಹಿಸಿದರು. ಈ ವೇಳೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದರು. ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ನೇತೃತ್ವದಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ನಿಷೇಧಿತ ಪ್ರದೇಶದಲ್ಲಿ ಮಠ ನಿರ್ಮಾಣ?