Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯರನ್ನು ಕೆಣಕಿ ಉಗಿಸಿಕೊಂಡ ಸಂಸದ!

ಟ್ವೀಟ್
ಬೆಂಗಳೂರು , ಭಾನುವಾರ, 5 ಮೇ 2019 (17:21 IST)
ಕೆಣಕಿದ ಸಂಸದ ರಾಜೀವ್ ಚಂದ್ರಶೇಖರ್ ಗೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿವಿದಿದ್ದಾರೆ.

ಟ್ವೀಟ್ ನಲ್ಲಿ ಸಿದ್ದರಾಮಯ್ಯರನ್ನು ಕೆಣಕಿದ್ದರು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್. ಟಿಪ್ಪು ಸುಲ್ತಾನ್ ಕುರಿತಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಕಿದ್ದ ಸ್ಟೇಟಸ್ ಮುಂದಿಟ್ಟುಕೊಂಡು ಸಿದ್ದರಾಮಯ್ಯರನ್ನು ಕೆಣಕಿದ್ದರು ರಾಜೀವ್ ಚಂದ್ರಶೇಖರ್.

webdunia
ಡಿಯರ್ ಸಿದ್ದರಾಮಯ್ಯನವರೇ ನೀವು ಇದೀಗ  ಇಮ್ರಾನ್ ಖಾನ್ ಅಪ್ಪಿಕೊಳ್ಳೋ ಸಮಯ. ಇದು ರಾಹುಲ್ ಗಾಂಧಿಗೆ ಹತ್ತಿರವಾಗಲು  ಸುಲಭದ ದಾರಿ ಎಂದು ಟ್ವೀಟ್ ಮಾಡಿದ್ದರು. ಸಂಸದ  ರಾಜೀವ್ ಟ್ವೀಟ್ ಗೆ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಟ್ವೀಟ್ ಮಾಡುವ ಮೊದಲು ಯೋಚಿಸಿ ಟ್ವೀಟ್ ಮಾಡಿ. ನಾನು ನಿಮ್ಮ ನರೇಂದ್ರ ಮೋದಿ ತರ ಶತ್ರು ದೇಶದ ಪ್ರಧಾನಿ ಜೊತೆ ಬಿರಿಯಾನಿ ತಿಂದಿಲ್ಲ. ಬಾಸ್ ಗಳ ಓಲೈಕೆಗಾಗಿ ನೈತಿಕ ಮೌಲ್ಯಗಳಲ್ಲಿ ರಾಜಿ ಮಾಡಿಲ್ಲ. ಬಾಸ್ ಗುಲಾಮರಾಗಿ ನಿಮ್ಮ ಹಾಗೆ  ಬದುಕೋದಕ್ಕಿಂದ ಟಿಪ್ಪು ಸುಲ್ತಾನ್  ಹಾಗೆ ಬದುಕೋದು ಮೇಲು ಎಂದು ಟ್ವೀಟ್ ಮಾಡಿ ಖಡಕ್ ಉತ್ತರ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾವಿಗೆ ಬಿದ್ದದ್ದು ಏನು ಗೊತ್ತಾ? ಶಾಕಿಂಗ್