ಇ-ಆಧಾರ್ ಡೌನ್ಲೋಡ್ ಮಾಡುವವರಿಗೆ ಯುಐಡಿಎಐ ನೀಡಿದೆ ಈ ಎಚ್ಚರಿಕೆ

ಭಾನುವಾರ, 5 ಮೇ 2019 (07:20 IST)
ನವದೆಹಲಿ : ಆಧಾರ್ ಕಾರ್ಡ್ ನೀಡುವ ಯುಐಡಿಎಐ, ಇ-ಆಧಾರ್ ಡೌನ್ಲೋಡ್ ಮಾಡುವವರು ಕೇವಲ ಯುಐಡಿಎಐ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಡೌನ್ಲೋಡ್ ಮಾಡಿ ಎಂದು ಟ್ವೀಟ್ ಮಾಡುವುದರ ಮೂಲಕ ಎಚ್ಚರಿಕೆ ನೀಡಿದೆ.
ನಿಮ್ಮ ಫೋನ್ ಬ್ರೌಸರ್ ನಲ್ಲಿ ಯುಐಡಿಎಐ ವೆಬ್ಸೈಟ್ https://uidai.gov.in ಓಪನ್ ಮಾಡಬೇಕು. ಡೌನ್ಲೋಡ್ ಆಧಾರ್ ಅಥವಾ https://eaadhaar.uidai.gov.in/ ಲಿಂಕ್ ಕ್ಲಿಕ್ ಮಾಡಬೇಕು. ನಂತರ Enter your personal details ಸೆಕ್ಷನ್ ನಲ್ಲಿ ಆಧಾರ್ ಆಯ್ಕೆ ಕ್ಲಿಕ್ ಮಾಡಬೇಕು. ಇದರಲ್ಲಿ Regular Aadhaar ಸೆಲೆಕ್ಟ್ ಮಾಡಿ. ಆಧಾರ್ ನಂಬರ್, ಹೆಸರು, ಪಿನ್ ಕೋಡ್ ಹಾಕಿ. m-Aadhaar ನಿಮ್ಮ ಬಳಿಯಿದ್ರೆ TOTP ಅಥವಾ OTP ಜನರೇಟ್ ಮಾಡಬೇಕು. ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಇದನ್ನು ಹಾಕಿದ ಮೇಲೆ ಆಧಾರ್ ಕಾರ್ಡ್ ಕಾಣಿಸಲಿದ್ದು, ಡೌನ್ಲೋಡ್ ಆಧಾರ್ ಕ್ಲಿಕ್ ಮಾಡಬೇಕು.


ಆದರೆ ಸಾರ್ವಜನಿಕ ಕಂಪ್ಯೂಟರ್ ನಲ್ಲಿ ಆಧಾರ್ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆಯುವವರು ಪ್ರಿಂಟ್ ತೆಗೆದ ನಂತರ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಆದ ಆಧಾರ್ ಪ್ರತಿಯನ್ನು ಡಿಲಿಟ್ ಮಾಡಬೇಕು. ಡೌನ್ಲೋಡ್ ಆದ ಪ್ರತಿಯನ್ನು ನೀವು ಡಿಲಿಟ್ ಮಾಡ್ತಿದ್ದಂತೆ ಅದು ರಿ ಸೈಕಲ್ ಬಿನ್ ಸೇರುತ್ತದೆ. ಅಲ್ಲಿಗೆ ಹೋಗಿ ಮತ್ತೆ ಪ್ರತಿಯನ್ನು ಡಿಲಿಟ್ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ವಿದ್ಯೆ ಕಲಿಸುವ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ನಡೆದಿದೆ ಇಂತಹ ನೀಚ ಕೃತ್ಯ