ಮುಂಬೈ : ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್ ಮೇಲ್ ಮಾಡುವುದರ ಮೂಲಕ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
									
										
								
																	
ಈ ಕಾಮುಕ ಶಿಕ್ಷಕ ವಿದ್ಯಾರ್ಥಿನಿ 8ನೇ ತರಗತಿ ಓದುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ಬೆದರಿಸಿ ಅತ್ಯಾಚಾರ ಎಸಗಿ ಆಕೆಯ ಬೆತ್ತಲೆ ಫೋಟೋಗಳನ್ನು ತೆಗೆದಿದ್ದಾನೆ. ಅದನ್ನು ತೋರಿಸಿ ಬಹಿರಂಗಪಡಿಸುವುದಾಗಿ ಬೆದರಿಸಿ ಆಕೆ 8, 9,10 ನೇ ತರಗತಿಯಲ್ಲಿ ಓದುವಾಗಲೂ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
									
			
			 
 			
 
 			
					
			        							
								
																	
ಇಷ್ಟಕ್ಕೆ ಸುಮ್ಮನಾಗದ ಶಿಕ್ಷಕ ಆಕೆ  ಬೇರೆ ಕಡೆ ಕಾಲೇಜು ಸೇರಿಕೊಂಡಾಗಲೂ ಕಿರುಕುಳ ನೀಡಿದ್ದಾನೆ. ಅದನ್ನು ಆಕೆ ವಿರೋಧಿಸಿದಕ್ಕೆ ಆಕೆಯ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸಿ ಆಡಳಿತ ಮಂಡಳಿಗೆ ದೂರು ನೀಡಿದ್ದಾನೆ.
									
										
								
																	
ಆದರೆ ಈತನ ಮಾತನ್ನು ಒಪ್ಪದ ಆಡಳಿತ ಮಂಡಳಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಪೋಷಕರಿಗೆ ತಿಳಿಸಿದೆ. ನಂತರದಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.