Select Your Language

Notifications

webdunia
webdunia
webdunia
webdunia

ತನ್ನ ಸೀಕ್ರೆಟ್ ನ್ನು ತಾನೇ ಬಹಿರಂಗಗೊಳಿಸಿದ ಹಾರ್ದಿಕ್ ಪಾಂಡ್ಯ

ತನ್ನ ಸೀಕ್ರೆಟ್ ನ್ನು ತಾನೇ ಬಹಿರಂಗಗೊಳಿಸಿದ ಹಾರ್ದಿಕ್ ಪಾಂಡ್ಯ
ಮುಂಬೈ , ಶನಿವಾರ, 4 ಮೇ 2019 (07:55 IST)
ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್ ಗುಟ್ಟನ್ನು ತಮ್ಮ ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಬಳಿ ಬಹಿರಂಗಪಡಿಸಿದ್ದಾರೆ.


ಪಾಂಡ್ಯ ಕೆಳ ಕ್ರಮಾಂಕದಲ್ಲಿ ಸಿಡಿದು ತಂಡದ ಮೊತ್ತ ಉಬ್ಬಲು ಕಾರಣವಾಗುತ್ತಾರೆ. ಅವರ ಬ್ಯಾಟಿಂಗ್ ನೋಡಿ ಬೌಲರ್ ಗಳು ಹೇಗೆ ಬೌಲ್ ಮಾಡಬೇಕೆಂದು ತಿಳಿಯದೇ ಕಕ್ಕಾಬಿಕ್ಕಿಯಾಗುತ್ತಾರೆ. ಹೀಗಾಗಿ ನಿಮಗೆ ಹೇಗೆ ಬಾಲ್ ಎಸೆಯಬೇಕು? ನಿಮಗೆ ಬಾಲ್ ಮಾಡಲೇಬಾರದೇ? ಎಂದು ಪಾಂಡ್ಯಗೆ ಬುಮ್ರಾ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪಾಂಡ್ಯ ಕೂಡಾ ಅಷ್ಟೇ ತಮಾಷೆಯಾಗಿ ಉತ್ತರಿಸಿದ್ದಾರೆ. ‘ಹೌದು ಹೌದು ಬಹುಶಃ ನನಗೂ ಹಾಗೇ ಅನಿಸುತ್ತದೆ. ಬಾಲ್ ನನ್ನ ಬ್ಯಾಟ್ ಗೆ ಚೆನ್ನಾಗಿ ತಗುಲುತ್ತಿದೆ. ನಾನು ಹೀಗಾಗಿ ಕ್ಲಿಕ್ ಆಗುತ್ತಿದ್ದೇನೆ. ಇಲ್ಲಿನ ವಾತಾವರಣವೇ ಹಾಗಿದೆ. ಅದಕ್ಕಾಗಿ ನಾನು ಮುಂಬೈ ಇಂಡಿಯನ್ಸ್ ಮ್ಯಾನೇಜ್ ಮೆಂಟ್ ಗೆ ಧನ್ಯವಾದ ಸಲ್ಲಿಸಬೇಕು ಎಂದು ಪಾಂಡ್ಯ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹತ್ವದ ಘಟ್ಟದಲ್ಲಿ ಡೆಲ್ಲಿಗೆ ಕೈ ಕೊಟ್ಟ ರಬಾಡ