Publish Date: Fri, 03 May 2019 (06:16 IST)
Updated Date: Fri, 03 May 2019 (06:17 IST)
ಚೆನ್ನೈ: ವಿಕೆಟ್ ಕೀಪರ್ ಧೋನಿ ಮಿಂಚಿನ ಗತಿಯಲ್ಲಿ ಬ್ಯಾಟ್ಸ್ ಮನ್ ರನ್ನು ಸ್ಟಂಪ್ ಔಟ್ ಮಾಡುವುದರಲ್ಲಿ ನಿಷ್ಣಾತ. ಹಾಗಿದ್ದರೂ ಧೋನಿಗೆ ಈ ಕಲೆ ಕರಗತವಾಗಿದ್ದು ಹೇಗೆ ಗೊತ್ತಾ?
ಈ ಬಗ್ಗೆ ಧೋನಿಯೇ ಬಹಿರಂಗಪಡಿಸಿದ್ದಾರೆ. ತಾನು ಅಷ್ಟು ವೇಗವಾಗಿ ಕಣ್ಣು ಮುಚ್ಚಿ ಒಡೆಯುವುದರೊಳಗೆ ಸ್ಟಂಪ್ ಔಟ್ ಮಾಡುವುದು ಹೇಗೆ ಎಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ಬಳಿಕ ಧೋನಿ ಬಾಯ್ಬಿಟ್ಟಿದ್ದಾರೆ.
‘ಬಹುಶಃ ನನಗೆ ಈ ಕಲೆ ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದರಿಂದ ಅಭ್ಯಾಸವಾಗಿದೆ. ಅಲ್ಲಿ ನಾನು ಆರಂಭದ ಹಂತ ಕಲಿತೆ. ಈಗ ಅದರಲ್ಲಿ ಪರಿಣತಿ ಪಡೆದೆ. ನನ್ನ ಪ್ರಕಾರ ಎಲ್ಲದಕ್ಕೂ ಅಭ್ಯಾಸ ಬೇಕು. ನನಗೆ ಇಲ್ಲಿ ಟೆನಿಸ್ ಬಾಲ್ ಕ್ರಿಕೆಟೇ ಸಹಾಯ ಮಾಡುತ್ತಿದೆ’ ಎಂದು ಧೋನಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ