Select Your Language

Notifications

webdunia
webdunia
webdunia
webdunia

ನಾನು ಕೆಮ್ಮಿದ್ರೆ ಎದುರಾಳಿಗಳಿಗೆ ಭಯವಾಗಬಹುದು ಎಂದು ತಮಾಷೆ ಮಾಡಿದ ಧೋನಿ

ನಾನು ಕೆಮ್ಮಿದ್ರೆ ಎದುರಾಳಿಗಳಿಗೆ ಭಯವಾಗಬಹುದು ಎಂದು ತಮಾಷೆ ಮಾಡಿದ ಧೋನಿ
ಚೆನ್ನೈ , ಗುರುವಾರ, 2 ಮೇ 2019 (07:31 IST)
ಚೆನ್ನೈ: ಕಳೆದ ಕೆಲವು ದಿನಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಜ್ವರದಿಂದ ಬಳಲುತ್ತಿದ್ದ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಇದೇ ವಿಷಯವನ್ನು ಧೋನಿ ಇದೀಗ ಹಾಸ್ಯಕ್ಕೆ ಬಳಸಿಕೊಂಡಿದ್ದಾರೆ.


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೆ ಮೊದಲು ಟಾಸ್ ಸಂದರ್ಭದಲ್ಲಿ ಸಂದರ್ಶಕರ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಧೋನಿ ತಮ್ಮ ಅನಾರೋಗ್ಯವನ್ನೇ ಹಾಸ್ಯ ಮಾಡಿಕೊಂಡಿದ್ದಾರೆ.

‘ಎದುರಾಳಿಗಳಿಗೆ ಬಹುಶಃ ಈಗ ನನ್ನ ಜ್ವರದ್ದೇ ಚಿಂತೆಯಿರಬಹುದು. ಯಾಕೆಂದರೆ ನಾನು ಕೆಮ್ಮುತ್ತಿದ್ದರೆ ಅವರಿಗೆ ಭಯವಾಗಬಹುದು’ ಎಂದು ಧೋನಿ ನಗುತ್ತಾ ತಮಾಷೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಲಿಕ ನೆಸ್ ವಾಡಿಯಾರಿಂದಾಗಿ ನಿಷೇಧದ ಭೀತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್