Publish Date: Thu, 02 May 2019 (07:21 IST)
Updated Date: Thu, 02 May 2019 (07:23 IST)
ನೋಯ್ಡಾ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿಗೆ ಸೇರಿದ ಮನೆಯೊಂದರಲ್ಲಿ ಖದೀಮರು ಕನ್ನ ಹಾಕಿದ್ದು ಎಲ್ ಸಿಡಿ ಟಿವಿಯೊಂದನ್ನು ಹೊತ್ತೊಯ್ದಿದ್ದಾರೆ.
ಧೋನಿ ಒಡೆತನದ ನೋಯ್ಡಾದ ಮನೆಯನ್ನು ವಿಕ್ರಂ ಸಿಂಗ್ ಎಂಬವರಿಗೆ ಬಾಡಿಗೆಗೆ ನೀಡಲಾಗಿತ್ತು. ಆದರೆ ತಮ್ಮ ಮನೆಯಲ್ಲಿ ಎಲ್ ಸಿಡಿ ಟಿವಿಯೊಂದು ಕಾಣೆಯಾಗಿರುವುದನ್ನು ಗಮನಿಸಿರುವ ವಿಕ್ರಮ್ ಪೊಲೀಸರಿಗೆ ಕಳ್ಳತನದ ದೂರು ನೀಡಿದ್ದಾರೆ.
ಮನೆ ನವೀಕರಣ ಕೆಲಸ ನಡೆಯುತ್ತಿರುವಾಗ ಮೂರು ಎಲ್ ಸಿಡಿ ಟಿವಿಗಳನ್ನು ಪ್ಯಾಕ್ ಮಾಡಿಡಲಾಗಿತ್ತು. ಇದರಲ್ಲಿ ಒಂದು ಟಿವಿ ಕಾಣೆಯಾಗಿರುವುದನ್ನು ವಿಕ್ರಂ ಸಿಂಗ್ ಗಮನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ