Publish Date: Tue, 30 Apr 2019 (08:27 IST)
Updated Date: Tue, 30 Apr 2019 (08:28 IST)
ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಹಸೀನ್ ಶಮಿ ಮತ್ತು ಕುಟುಂಬದವರ ವಿರುದ್ಧ ಲೈಂಗಿಕ ಕಿರುಕುಳ, ಗೃಹ ಹಿಂಸೆ ಇತ್ಯಾದಿ ಆರೋಪ ಮಾಡಿ ದೂರು ದಾಖಲಿಸಿದ್ದರು. ಇದೀಗ ಜಹಾನ್ ಶಮಿಯಿಂದ ಪ್ರತ್ಯೇಕವಾಗಿದ್ದಾರೆ.
ಹಾಗಿದ್ದರೂ ಪುತ್ರಿ ಜತೆ ಶಮಿ ನಿವಾಸಕ್ಕೆ ಬಂದ ಜಹಾನ್ ಅತ್ತೆಯೊಂದಿಗೆ ವಾಗ್ವಾದ ನಡೆಸಿದ್ದಕ್ಕೆ ತಕ್ಷಣವೇ ಶಮಿ ಕುಟುಂಬ ದೂರು ನೀಡಿದೆ. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಜಹಾನ್ ರನ್ನು ಬಂಧಿಸಿದ್ದಾರೆ. ಆದರೆ ಇದೆಲ್ಲಾ ಶಮಿ ಕುತಂತ್ರ ಎಂದು ಜಹಾನ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ